ಸುರಂಗ ಮಾರ್ಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸೇಫ್

ಸುರಂಗ ಮಾರ್ಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸೇಫ್

ಡೆಹ್ರಾಡೂನ್: ಕಳೆದ ಕೆಲವು ದಿನಗಳ ಹಿಂದೆ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರು ತಮ್ಮ ಪ್ರಾಣಭಯದಲ್ಲಿ ಸುರಂಗದ ಒಳಗಡೆ ಸಿಲುಕಿದ್ದರು ಆದರಿಗ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ

ಹೌದು, ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ ಝಾನ್ಸಿಯಿಂದ ಬಂದ ಇಲಿಗಣಿಗಾರರು ಮಾತನಾಡುತ್ತಾ ನಮಗೆ ಇದು ದಿನನಿತ್ಯದ ಕೆಲಸವಾಗಿದೆ ಎಂದಿದ್ದಾರೆ. ಝಾನ್ಸಿಯ ರ್ಯಾಟ್ ಮೈನರ್ಸ್ ಈ ರಕ್ಷಣಾ ಕಾರ್ಯ ಮುಂದುವರೆಸಿದ್ದು, ಅವರ ಸಾಹಸದಿಂದ 17 ದಿನಗಳ ನಂತರ ಇಡೀ ದೇಶಕ್ಕೆ ದೊಡ್ಡ ಸಂತೋಷ ಸುದ್ದಿ ಸಿಕ್ಕಿದೆ.

ಝಾನ್ಸಿಯಿಂದ ಉತ್ತರಕಾಶಿ ತಲುಪಿದ ಕೆಚ್ಚೆದೆಯ ಇಲಿ ಗಣಿಗಾರರು ಅದ್ಭುತ ಆತ್ಮವಿಶ್ವಾಸವನ್ನು ತೋರಿಸಿದ್ದಾರೆ. ಸುರಂಗದ ಹೊರಗೆ ಹಾಜರಿದ್ದ ಹಿರಿಯ ಅಧಿಕಾರಿಗಳ ಮುಂದೆ ಇಲಿ ಗಣಿಗಾರರು ಹೇಳಿದ ಮಾತುಗಳೆಲ್ಲಾ ಎಲ್ಲರ ಧೈರ್ಯವನ್ನು ಹೆಚ್ಚಿಸಿತು. ಅಲ್ಲಿದ್ದವರೆಲ್ಲರೂ ನಾವು ಸುರಂಗದೊಳಗೆ ಹೋಗಲು ಹೆದರುವುದಿಲ್ಲ ಎಂದು ಹೇಳಿದ್ದರು. ಇಲ್ಲಿ 800 ಎಂಎಂ ಪೈಪ್ ಇದೆ, ನಾವು 600 ಎಂಎಂ ಪೈಪ್‌ಗೆ ಪ್ರವೇಶಿಸಿ ಇಲಿ ಗಣಿಗಾರಿಕೆ ಮಾಡುತ್ತೇವೆ. ಇದು ದೈನಂದಿನ ಕೆಲಸ. ಉತ್ತರಾಖಂಡದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಸಂದರ್ಭದಲ್ಲಿ ಝಾನ್ಸಿಯ ನಿವಾಸಿ ಪರ್ಸಾದಿ ಲೋಧಿ ಹೀಗೆ ಹೇಳಿದ್ದರು.

 

Related