ನಗರಾಭಿವೃದ್ಧಿ ಸಚಿವರಿಂದ 40 ಸಾವಿರ ಕುಟುಂಬಕ್ಕೆ ರೇಷನ್ ವಿತರಣೆ

ನಗರಾಭಿವೃದ್ಧಿ ಸಚಿವರಿಂದ 40 ಸಾವಿರ ಕುಟುಂಬಕ್ಕೆ ರೇಷನ್ ವಿತರಣೆ

ಕೆ.ಆರ್.ಪುರ, ಏ. 05:  ನಗರಾಭಿವೃದ್ಧಿ ಸಚಿವ  ಬಿ.ಎ. ಬಸವರಾಜ ರಿಂದ 40 ಸಾವಿರ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಯಿತು. ಭಾರತ ಲಾಕ್ ಡೌನ್ ಹಿನ್ನೆಲೆ ಕೆ.ಆರ್.ಪುರ ಕ್ಷೇತ್ರದ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ಸೋಮಣ್ಣ ಮೂಲಕ ಸಚಿವ ಬೈರತಿ ಬಸವರಾಜ ವಿತರಣೆ ಮಾಡಿದರು.

ಕಳೆದ ಎಂಟು ವರ್ಷಗಳಿಂದ ಕ್ಷೇತ್ರದ ಜನತೆಗೆ ಹಬ್ಬಗಳ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿಕೊಂಡು ಬರುತ್ತಿರುವ ಸಚಿವ ಬಸವರಾಜ ಈ ಭಾರಿ ಭಾರತ ಲಾಕ್ ಡೌನ್ ನಿಂದ ಜನರಿಗೆ 15 ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿ ವಿತರಣೆ ಮಾಡಿದರು. ಭಟ್ಟರಹಳ್ಳಿ ಕಲ್ಯಾಣ ಮಂಟಪದಲ್ಲಿ 40,000 ಕಿಟ್ ಗಳನ್ನು ಸಿದ್ದಪಡಿಸಿ ಕ್ಯಾಂಟರ್ ವಾಹನಗಳ ಮೂಲಕ ಕ್ಷೇತ್ರದ ಜನರ ಮನೆ ಬಾಗಿಲಿಗೆ ವಿತರಣೆ ಮಾಡಿದರು.

ಕಂದಾಯ ಸಚಿವ ಅಶೋಕ್ ಮಾತನಾಡಿ, ಕಷ್ಟದಲ್ಲಿರುವ ಜನರಿಗೆ ನೆರವಾಗಲು 40 ಸಾವಿರ ಜನಕ್ಕೆ ರೇಷನ್ ಕಿಟ್ ಅನ್ನು ಬೈರತಿ ಬಸವರಾಜ ನೀಡಿದ್ದಾರೆ ಇದು ದೇವರು ಮೆಚ್ಚುವ ಕೆಲಸ, ಮೊದಲು ಲಾಕ್ ಡೌನ್ ಮಾಡಿದ್ದು ಕರ್ನಾಟಕ ಮುಂಜಾಗ್ರತ ಕ್ರಮ ಕೈಗೊಂಡು ಕರ್ನಾಟಕದಲ್ಲಿ ಸಾವು ನೋವು ಕಡಿಮೆ ಮಾಡಲಾಗಿದೆ, ಕಾರ್ಮಿಕ ಇಲಾಖೆ ವತಿಯಿಂದ ಒಂದು ಲಕ್ಷ ಬ್ಯಾಗ್ ಗಳನ್ನು ಮಾಡಿದ್ದೇವೆ.

ಒಂದು ಕ್ಷೇತ್ರಕ್ಕೆ ಐದು ಸಾವಿರ ಬ್ಯಾಗ್ ಈಗಾಗಲೇ ಕೊಟ್ಟಿದ್ದೇವೆ, ಪ್ರತಿದಿನ ಅರ್ಧ ಲೀಟರ್ ಹಾಲು ನೀಡ್ತಿದ್ದೇವೆ, ಕರ್ನಾಟಕದಲ್ಲಿ ಹಸಿವಿನಿಂದ ಬಳಲುಬಾರದು ಬೆಂಗಳೂರು ಸಚಿವರು ಪ್ರತಿದಿನ ಸಭೆ ಮಾಡುತ್ತಿದ್ದೇವೆ ರೋಗ ಹರಡಲು ಅವಕಾಶ ಕೊಡದಿರಲು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ, ಲಾಕ್ ಡೌನ್ ಅವಧಿ ನಂತರ ತೊಂದರೆಗೆ ಒಳಗಾದವರಿಗೆ ನೆರವು ನೀಡ್ತೇವೆ, ಹಾಲು ಒಂದು ಲೀಟರ್ ಕೊಡ್ತಿದ್ವಿ ಕೆಲ ಕಡೆ ಡೈರಿಗೆ ಹಿಂದೆ ಬಂದಿದೆ ಆದ್ರಿಂದ ಸಭೆಯಲ್ಲಿ  ಅರ್ಧ ಲೀಟರ್ ನೀಡಲು ತೀರ್ಮಾನ ಮಾಡಿದ್ದು ಸರ್ಕಾರದಿಂದ ನಿನ್ನೆಯಿಂದ ರೇಷನ್ ನೀಡುತ್ತಿದ್ದು, ಕಳಪೆ ರೇಷನ್ ಕಂಡು ಬಂದ್ರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಆರ್‌ ಅಶೋಕ್ ತಿಳಿಸಿದರು.

ಇಂದು ಜ್ಯೋತಿ ಬೆಳಗಿಸೋ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ ವಿಚಾರವಾಗಿ ಮಾತನಾಡಿದ ಅಶೋಕ್ ದೀಪ ಎಲ್ಲರೂ ಬೆಳಗಿಸುತ್ತಾರೆ, ಕುಮಾರಸ್ವಾಮಿಯವರು ಲಕ್ಷಾಂತರ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಿದ್ದಾರೆ. ಕೊರೊನಾ ಓಡಿಸಲು ದೀಪ ಹಚ್ಚೋಕೆ ಪಿಎಂ ಹೇಳಿದ್ದಾರೆ ಮನುಷ್ಯನ ಪ್ರಾಣದ ಜೊತೆ ಚೆಲ್ಲಾಟ ಆಡಬಾರದು ಎಂದು ತಿಳಿಸಿದರು.

 

 

Related