2nd ಪಿಯುಸಿ ಫಲಿತಾಂಶ; ರಾಜ್ಯದಲ್ಲಿ ಮತ್ತೆ ಬಾಲಕಿಯರೇ ಮೇಲುಗೈ..!

2nd ಪಿಯುಸಿ ಫಲಿತಾಂಶ; ರಾಜ್ಯದಲ್ಲಿ ಮತ್ತೆ ಬಾಲಕಿಯರೇ ಮೇಲುಗೈ..!

ಬೆಂಗಳೂರು: ಇಂದು ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು ಈ ಬಾರಿಯೂ ಕೂಡ ರಾಜ್ಯದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (ಕೆಇಎಸ್ಎಬಿ) 2024 ರ ಕರ್ನಾಟಕ ಪದವಿ ಪೂರ್ವ ಪ್ರಮಾಣಪತ್ರ (ದ್ವಿತೀಯ ಪಿಯುಸಿ) ಅಥವಾ 12 ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟ ಮಾಡಲಾಗಿದೆ.

ಈ ಬಾರಿ ಕೂಡ ಬಾಲಕಿಯರು ಪಾಸಾಗಿದ್ದಾರೆ. ಈ ಮೂಲಕ ಮೇಲೈಗೈ ಸಾಧಿಸಿದ್ದಾರೆ. ಈ ಬಾರಿ 6.5 ಹೆಚ್ಚಳವಾಗಿದ್ದು, ಶೇಕಡ 84.45 ಮಂದಿ ಪಾಸಾಗಿದ್ದಾರೆ. 1,28448 ಕಲಾ 1,74,315 ವಾಣಿಜ್ಯ 2,49,927 ವಿಜ್ಞಾನ ವಿದ್ಯಾರ್ಥಿಳು ಪಾಸಾಗಿದ್ದಾರೆ. ಈ ಬಾರಿ ಶೇ 81.15 ಮಂದಿ ಪಾಸಾಗಿದ್ದಾರೆ.

ಕರ್ನಾಟಕ ಬೋರ್ಡ್ ಪರೀಕ್ಷಾ ಪೂರ್ವ ಫಲಿತಾಂಶ ಪ್ರಕಟವಾದ ನಂತರ, ತಮ್ಮ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಅಥವಾ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಪ್ರಕ್ರಿಯೆಯನ್ನು ಪ್ರಾರಂಭಿಸಲು, ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಮರು ಮೌಲ್ಯಮಾಪನಕ್ಕಾಗಿ ನಿಗದಿತ ಶುಲ್ಕದೊಂದಿಗೆ ಸಲ್ಲಿಸಬೇಕಾಗಿದೆ.

 

Related