ಕೊರೋನಾ: ಒಂದೇ ದಿನ 26,506 ದಾಖಲೆ

ಕೊರೋನಾ: ಒಂದೇ ದಿನ 26,506 ದಾಖಲೆ

ನವದೆಹಲಿ: ಭಾರತದಲ್ಲಿ ಕೊರೋನಾ ಮಹಾಮಾರಿಯ ನಾಗಲೋಟ ಮುಂದುವರೆದಿದ್ದು, ಒಂದೇ ದಿನ ದಾಖಲೆ ಪ್ರಮಾಣದಲ್ಲಿ 26,506 ಮಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. 475 ಮಂದಿ ಮೃತಪಟ್ಟಿದ್ದಾರೆ.

ಈ ಪ್ರಕಾರ ಒಟ್ಟು ಭಾರತದಲ್ಲಿ ಶುಕ್ರವಾರಕ್ಕೆ (ಜು.10ಕ್ಕೆ) 7,93,802 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಒಟ್ಟು 7,93,802 ಮಂದಿ ಕೊರೋನಾ ಸೋಂಕಿತರಲ್ಲಿ 2,76,685 ಮಂದಿ ಚಿಕಿತ್ಸೆಗೆ ಒಳಗಾಗಿದ್ದು, 4,95,513 ಮಂದಿ ಗುಣಮುಖರಾಗಿದ್ದಾರೆ. 21,604 ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲೇ ಯಥೇಚ್ಛ ಅಂದರೆ 2,30,599 ಕೊರೋನಾ ಸೋಂಕಿಗೆ ಒಳಪಟ್ಟಿದ್ದಾರೆ. 2ನೇ ಸ್ಥಾನದಲ್ಲಿ ತಮಿಳುನಾಡು (1,26,581), 3ನೇ ಸ್ಥಾನದಲ್ಲಿ ದೆಹಲಿ (1,07,051) ಇದ್ದು, ಇಡೀ ದೇಶದ ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಪರಿಸ್ಥಿತಿ ಎದುರಾಗಿದೆ.

Related