ಬೀಜಿಂಗ್, ಫೆ. 13 : ಚೀನಾ ಅಲ್ಲೋಲ ಕಲ್ಲೋಲ ಮಾಡಿರುವ ಕೊರೋನಾ ವೈರಾಣು ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಒಂದೇ ತಿನ 242 ಜನರನ್ನು ಆಪೋಶನ ತೆಗೆದುಕೊಂಡಿದೆ. ಡೆಡ್ಲಿ ಕೊರೋನಾ ವೈರಾಣುವಿನ ಮೃತ್ಯುಕೋಟೆಯ ಕೇಂದ್ರ ಬಿಂದುವಾದ ಹುಬೇ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಈ ಮಾರಕ ಸೋಂಕಿಗೆ ಇನ್ನೂ 242 ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 1,500 ತಲುಪುವ ಹಂತದಲ್ಲಿದೆ.