200 ವಿಶೇಷ ರೈಲುಗಳ ಓಡಾಟ

200 ವಿಶೇಷ ರೈಲುಗಳ ಓಡಾಟ

ನವದೆಹಲಿ: ಕೊರೋನಾ ಲಾಕ್‌ಡೌನ್‌ನಿಂದ ನಿಶ್ಚಲಗೊಂಡಿರುವ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸತಾದ ಅಲ್‌ಲಾಕ್ ಮಾರ್ಗಸೂಚಿ ಸೂಚಿಸಿದೆ.

ಜೂನ್ 1ರಿಂದ ಭಾರತೀಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.  ಎಕ್ಸ್‌ಪ್ರೆಸ್, ಮೇಲ್ ಸೇವೆಗಳು ಸೇರಿದ್ದು, ಮೊದಲ ದಿನವೇ 1.45 ಲಕ್ಷ ಮಂದಿ ರೈಲು ಏರಲಿದ್ದಾರೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಲಾಕ್‌ಡೌನ್ ನಿಯಮಗಳನ್ನು ಈಗಾಗಲೇ ಸಡಿಲಗೊಳಿಸಲಾಗಿದೆ. ಸೋಮವಾರದಿಂದಲೇ 200ರಷ್ಟು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಜೂನ್ 30ರವರೆಗೆ ವಿಶೇಷ ರೈಲಿನಲ್ಲಿ ತೆರಳಲು 26 ಲಕ್ಷ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಈಗಾಗಲೇ ಓಡಾಡುತ್ತಿರುವ ಶ್ರಮಿಕ ರೈಲು ಹಾಗೂ ರಾಜಧಾನಿ ರೈಲುಗಳ ಹೊರತಾದ ರೈಲು ಸೇವೆ ಇದಾಗಿದೆ.

Related