ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆ ಹಾಗೂ ನಿರ್ಮಾಣ ಮಾಡುವ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಯಾಕೆಂದರೆ ಉಪೇಂದ್ರ ಅವರು ನಿರ್ಮಾಣ ಹಾಗೂ ನಟನೆ ಮಾಡುವ ಸಿನಿಮಾ ಹೆಚ್ಚು ಡಿಫ್ರೆಂಟ್ ಇರುತ್ತದೆ ಆದ್ದರಿಂದ ಉಪೇಂದ್ರ ನಟನೆಯ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ.
ಉಪೇಂದ್ರ ಅವರು ಯುಐ ಹಾಗೂ ಕಬ್ಜಾ ಸಿನಿಮಾ ಮಾಡಿದ ನಂತರ ಮತ್ತೆ ಇದೀಗ 2 ಬಹು ದೊಡ್ಡ ಬಜೆಟಿನ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಆ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹೆಚ್ಚು ಸಂತಸ ಮೂಡಿಸಿದೆ.
ಹೌದು, ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ 45 ಸಿನಿಮಾ ಹಾಗೂ ತಮಿಳಿನ ಕೂಲಿ ಸಿನಿಮಾ ಎರಡು ಒಂದೇ ದಿನ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳಿಗೆ ನಟ ಉಪೇಂದ್ರ ಅವರು ಎರಡೆರಡು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ನಟ ವಿಜಯ ರಾಘವೇಂದ್ರ 2ನೇ ಮದುವೆ ಬಗ್ಗೆ ಹೇಳಿದ್ದೇನು..?
ಉಪೇಂದ್ರ ನಟನೆಯ ‘45’ ಸಿನಿಮಾ ಹಾಗೂ ತಮಿಳು ಪ್ಯಾನ್ ಇಂಡಿಯಾ ಸಿನಿಮಾ ‘ಕೂಲಿ’ ಒಂದೇ ದಿನ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 15 ರಂದು ಬಿಡುಗಡೆ ಆಗಲಿದ್ದು, ಉಪೇಂದ್ರ ಅಭಿಮಾನಿಗಳು ಆಗಸ್ಟ್ 15ರ ಲಾಂಗ್ ವೀಕೆಂಡ್ನಲ್ಲಿ ತಮ್ಮ ಮೆಚ್ಚಿನ ನಟನ ಎರಡೆರಡು ಸಿನಿಮಾಗಳನ್ನು ನೋಡಬಹುದಾಗಿದೆ.
ಇನ್ನು 45 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಅಲ್ಲದೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಬಹುತೇಕ ಪೂರ್ಣವಾಗಿದೆಯಂತೆ. ಎರಡೂ ಸಿನಿಮಾಗಳ ಪ್ರಚಾರ ಕಾರ್ಯಗಳು ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಎಂದು ತಿಳಿದು ಬಂದಿದೆ.
