ಬೆಂಗಳೂರು: ಮದುವೆ ಆಗಲಿ ಅಥವಾ ಇನ್ನೊಬ್ಬರನಾಗಲಿ ನನ್ನ ಜೀವನದಲ್ಲಿ ಬರಮಾಡಿಕೊಳ್ಳುವುದು ಇದು ಅಸಾಧ್ಯಕರ ಮಾತು ಎಂದು ನಟ ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಅವರು, ಮೇಘನ ರಾಜ್ ಆಗಲಿ ಅಥವಾ ಇನ್ನೊಬ್ಬರಾಗಲಿ ನನ್ನ ಜೀವನದಲ್ಲಿ ಬರಮಾಡಿಕೊಳ್ಳಲು ನಾನು ಯಾವತ್ತು ಸಿದ್ಧವಿಲ್ಲ. ನನಗೆ ಅಂತ ನನ್ನ ಜೀವನವಿದೆ ನನ್ನ ಜೀವನದಲ್ಲಿ ನನಗೂ ಒಬ್ಬ ಮಗನಿದ್ದಾನೆ ಹಾಗಾಗಿ ನಾನು ಮದುವೆ ಬಗ್ಗೆ ಯಾವುದೇ ರೀತಿ ಯೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ಮಾತನಾಡಬೇಕು, ಅವರಿಗೂ ಒಂದು ಕುಟುಂಬವಿರುತ್ತದೆ ಆ ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಯಾವುದೇ ಒಂದು ಸುದ್ದಿ ಮಾಡಬೇಕಾದರೆ ಸಂಪೂರ್ಣವಾಗಿ ತಿಳಿದು ಸುದ್ದಿ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಬ್ಬಬಾ ರಾಮಾಯಣ ಸಿನಿಮಾದ ಬಜೆಟ್ ಕೇಳಿದರೆ ದಂಗಾಗೋದಂತೂ ಗ್ಯಾರೆಂಟಿ..!
‘ಸ್ಪಷ್ಟೀಕರಣ ಕೊಡಲು ಹಿಂಸೆ ಆಗುತ್ತದೆ, ಕೋಪವೂ ಬರುತ್ತದೆ. ಇವರು ಇನ್ನು ಮುಂದೆ ಹೇಗೆ ಇರುತ್ತಾರೋ ಎಂಬ ಕಾಳಜಿಯಲ್ಲಿ ಪ್ರೀತಿ ತೋರಿಸುತ್ತಾರೆ. ಇದು ಸುದ್ದಿ ಆಗಿ ಹಬ್ಬಿದಾಗ ಕುಟುಂಬಗಳ ಮೇಲೆ ಪ್ರಭಾವ ಬೀರುತ್ತದೆ. ನನಗೆ ಮಗ ಇದ್ದಾನೆ. ನಾನು 2ನೇ ಮದುವೆ ಬಗ್ಗೆ ಮಾತನಾಡಲ್ಲ. ಅದರ ಹಿಂದೆ ಯಾವುದೇ ಸತ್ಯ ಇಲ್ಲ. ಮೇಘನಾ ಆಗಲಿ, ಇನ್ಯಾರದ್ದೇ ಹೆಸರು ಇರಲಿ ಅದು ನಡೆಯೋದಿಲ್ಲ. ನನ್ನ ಬದಕಲ್ಲಿ ಇನ್ನೊಬ್ಬರನ್ನು ಬರಮಾಡಿಕೊಳ್ಳೋದು ಆಗದ ಕೆಲಸ’ ಎಂದು ಸ್ಪಷ್ಟ ಮಾತುಗಳಲ್ಲಿ
