15 ಕುರಿಮರಿ ಮೇಲೆ ತೋಳದ ದಾಳಿ

15 ಕುರಿಮರಿ ಮೇಲೆ ತೋಳದ ದಾಳಿ

ಕೊಟ್ಟೂರು : ತಾಲೂಕಿನ ಹಾರಾಳು ಗ್ರಾಮದ ಚೌಡಪ್ಪ ತಂದೆ ಸಿದ್ದಪ್ಪ ಮಗ ಕುರಿ ಕೊಟ್ಟಿಗೆಯಲ್ಲಿ ಸಾಕಿದ್ದ 15 ಕುರಿ ಮರಿಗಳ ಮೇಲೆ ತೋಳ ದಾಳಿ ಮಾಡಿ ಕಚ್ಚಿ ಪರಾರಿ ಆಗಿ ಹೋಗಿದೆ.

ರಾತ್ರಿ ಕೊಟ್ಟಿಗೆಯಲ್ಲಿ ಹಾಕಿದ ಕುರಿ ಮರಿಗಳು ಬೆಳಗ್ಗೆ ಎದ್ದು ನೋಡಿದ ತಕ್ಷಣ ಎಲ್ಲೆಂದರಲ್ಲಿ ಬಿದ್ದ 15 ಮರಿಗಳು ಸತ್ತಿದ್ದನ್ನು ಕಂಡು ಸಿದ್ದಪ್ಪ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಕುರಿ ಸಕಾಣಿಕೆ ಮಾಡಿ ಜೀವನ ನಡಿಸುವುದು ಕಷ್ಟದ ಕೆಲಸ ಬೆಳಿಗ್ಗೆ ರಾತ್ರಿ ಎನ್ನದೇ ಸಾಕಿದ ಕುರಿಮರಿಗೆ ಬಗ್ಗೆ ಹೆಳಿದರು.

ಕುರಿಮರಿ ತೋಳ ದಾಳಿಯ ಸ್ಥಳಕ್ಕೆ ಪಶು ವೈದ್ಯ ಪ್ರಕಾಶ್ ಕಿತ್ತೂರು ಭೇಟಿ ನೀಡಿ ದಾಳಿಯಲ್ಲಿ ಕುರಿಮರಿಗಳ 80 ಸಾವಿರಕ್ಕೂ ಹಣದ ನಷ್ಟವಾಗಿದೆಯೆಂದು ಕುರಿ ಸಾಕಿದ ಸಿದ್ದಪ್ಪನನ್ನು ಸಂತೈಸಿದರು. ಅರಣ್ಯ ಇಲಾಖೆಯ ಗಾಳೆಪ್ಪ ತೋಳವನ್ನು ಹಿಡಿಯುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪದೇ ಪದೇ ಇದೇ ರೀತಿ ದಾಳಿಗೆ ಒಳಗಾಗದಂತೆ ಆದಷ್ಟು ಬೇಗನೆ ಕಾಡುಪ್ರಾಣಿಯನ್ನು ಹಿಡಿಯಬೇಕು ಎಂದು ಕುರಿ ಸಂಘದ ಅಧ್ಯಕ್ಷ ರುದ್ರಪ್ಪ ಒತ್ತಾಯಿಸಿದ್ದಾರೆ.

Related