ನಿರುದ್ಯೋಗ ಯುವಕ ಯುವತಿಯರಿಗೆ ಸುವರ್ಣ ಅವಕಾಶ ಒದಗಿ ಬಂದಿದ್ದು, ನವೋದಯ ವಿದ್ಯಾಲಯ ಸಮಿತಿಯಲ್ಲಿ ಸುಮಾರು 1377 ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದಾರೆ. ಆಸಕ್ತವುಳ್ಳ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಹೌದು, ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋದಕೇತರ ಹುದ್ದೆಗಳ ಭರ್ಜರಿ ನೇಮಕಾತಿಗೆ 1377 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ ನವೋದಯ ಶಾಲೆಗಳಲ್ಲಿ ಖಾಲಿ ಇರುವ ಬೋದಕೇತರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.
ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನವನ್ನು ನೀಡಲಾಗುತ್ತದೆ. ಇದರ ಜೊತೆಗೆ ಡಿಎ/ HRA ಮುಂತಾದ ಸೌಲಭ್ಯಗಳು ದೊರೆಯುತ್ತವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಹುದ್ದೆಗಳ ಹೆಸರು | ವಿದ್ಯಾರ್ಹತೆ |
ಸ್ಟಾಫ್ ನರ್ಸ್ | BSc (Relevant field) |
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ | Any Degree |
ಆಡಿಯೋ ಅಸಿಸ್ಟೆಂಟ್ | BCom |
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ | PG (Relevant Subject) |
ಲೀಗಲ್ ಅಸಿಸ್ಟೆಂಟ್ | Degree (Law) |
ಸ್ಟೆನೋಗ್ರಾಫರ್ | PUC and Steno course |
ಕಂಪ್ಯೂಟರ್ ಆಪರೇಟರ್ | BE/ BTECH/ BCA/ BSc |
ಕೆಟರಿಂಗ್ ಸೂಪರ್ವೈಸರ್ | Degree (hotel Management) |
ಜೂ. ಸೆಕ್ರೆಟೆರಿಯೇಟ್ ಅಸಿಸ್ಟೆಂಟ್ (ಕೇಂದ್ರ ಕಛೇರಿ) | 12th Class/ PUC |
ಜೂ. ಸೆಕ್ರೆಟೆರಿಯೇಟ್ ಅಸಿಸ್ಟೆಂಟ್ | 12th Class/ PUC |
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ | 10th & ITI (Relevant field) |
ಲ್ಯಾಬ್ ಅಟೆಂಡೆಂಟ್ | 10th & Lab Technician |
ಮೆಸ್ ಹೆಲ್ಪರ್ | 10th Class |
ಮಲ್ಟಿ ಟಾಸ್ಕಿಂಗ್ ಸ್ಟಾಫ್ | 10th Class |
ಅರ್ಜಿ ಶುಲ್ಕ/ Application Fees:
ಸಾಮಾನ್ಯ/ ಓಬಿಸಿ / EWS ಅಭ್ಯರ್ಥಿಗಳಿಗೆ: ರೂ. 1000/-
ಪಜಾ/ ಪಪಂ / ವಿಕಲಚೇತನ ಅಭ್ಯರ್ಥಿಗಳಿಗೆ : ರೂ. 500/-
ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 35 ವಯೋಮಿತಿಯನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ & ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
ಈ ಮೇಲಿನ ಹುದ್ದೆಗಳಿಗೆ ಶೀಘ್ರದಲ್ಲೇ ಆನ್ಲೈನ್ ಅರ್ಜಿ ಲಿಂಕ್ ಅನ್ನು ನವೋದಯ ವಿದ್ಯಾಲಯ ಸಮಿತಿಯು ಬಿಡುಗಡೆ ಮಾಡಲಿದೆ. ಆಸಕ್ತರು https://navodaya.gov.in/nvs/en/Home1 ವೆಬ್ಸೈಟ್ನಲ್ಲಿ ಅರ್ಜಿ ಲಿಂಕ್ ಪಡೆಯಬಹುದು.