105 ಅಡಿ ಎತ್ತರದ ತ್ರಿವರ್ಣ ಧ್ವಜ

105 ಅಡಿ ಎತ್ತರದ ತ್ರಿವರ್ಣ ಧ್ವಜ

ಬೆಂಗಳೂರು: 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಇಂದು ದೇಶ ಮತ್ತು ರಾಜ್ಯದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಸುಮಾರು 105 ಅಡಿ ಎತ್ತರವಿರುವ ತ್ರಿವರ್ಣ ಧ್ವಜವನ್ನು ಕ್ಷೇತ್ರದ ಶಾಸಕರಾಗಿರುವ ಎಂ ಸತೀಶ್ ರೆಡ್ಡಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನು ಧ್ವಜಾರೋಹಣ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ಭಾರತ ದೇಶ ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಬದುಕುತ್ತೇವೆ ಎಂದು ಹೇಳಿದರು.

ನಾವೆಲ್ಲರೂ ನಮ್ಮ ಹೆತ್ತ ತಾಯಿಯನ್ನು ಹೇಗೆ ಭಕ್ತಿಯಿಂದ ಆರಾಧಿಸುತ್ತೇವೋ ಅದೇ ರೀತಿ ನಮ್ಮ ದೇಶವನ್ನು ಭಕ್ತಿಯಿಂದ ಕಾಣುತ್ತೇವೆ.

ಇವತ್ತು ನಾವೆಲ್ಲರೂ ಸುರಕ್ಷಿತವಾಗಿ ನೆಮ್ಮದಿಯಾಗಿ ಇದ್ದೀವಿ ಎಂದರೆ ಅದು ನಮ್ಮ ದೇಶದ ಸೈನಿಕರೆ ಇದಕ್ಕೆ ಕಾರಣ. ನಾವು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ರೈತರೇ ಕಾರಣ. ಅದಕ್ಕಾಗಿ ನಾವು ನಮ್ಮ ದೇಶದ ರೈತರು ಮತ್ತು ಸೈನಿಕರನ್ನು ಗೌರವಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆಯ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಎಚ್ಎಸ್ಆರ್ ಫೆಡರೇಶನ್ ಅಧ್ಯಕ್ಷರಾದ ಬಿ ಎನ್ ಆರ್ ರೆಡ್ಡಿ, ಚಂದ್ರಶೇಖರ್ ಕೃಷ್ಣಮೂರ್ತಿ, ಬಿಬಿಎಂಪಿಯ ಕಾರ್ಯ ಪಾಲಕ ಅಭಿಯಂತರಾದ ಪಾಪಯ್ಯ ರೆಡ್ಡಿ, ರಾತೋಡ್, ನಾಗರಾಜ್, ರಾಜು, ಆರೋಗ್ಯ ಪರಿವೀಕ್ಷಕರಾದ ವಿನೋದ್, ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

 

Related