ಕೋಲ್ಕತ್ತದಲ್ಲಿ 100 ಅಡಿಯ ಬುದ್ಧನ ಪ್ರತಿಮೆ

ಕೋಲ್ಕತ್ತದಲ್ಲಿ 100 ಅಡಿಯ ಬುದ್ಧನ ಪ್ರತಿಮೆ

ಕೋಲ್ಕತ್ತ : ಇಲ್ಲಿನ ಆವೆಮಣ್ಣಿನ ಮಾದರಿಕಾರರೊಬ್ಬರು 100 ಅಡಿಯ ಭಗವಾನ್ ಬುದ್ಧನ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದು, ಇದು ದೇಶದಲ್ಲೇ ಅತಿ ದೊಡ್ಡದಾದ ಬುದ್ಧನ ವಿಗ್ರಹ ಎನ್ನಲಾಗಿದೆ.

ಮುಂದಿನ ವರ್ಷ ಬೋಧ್‌ಗಯಾದ ದೇವಸ್ಥಾನವೊಂದರಲ್ಲಿ ಇದು ಪ್ರತಿಷ್ಠಾಪನೆ ಆಗಲಿದೆ. ಬಾರಾನಗರದ ಘೋಷ್‌ಪಾರಾ ಪ್ರದೇಶದಲ್ಲಿರುವ ಮೈದಾನವೊಂದರಲ್ಲಿ ಫೈಬರ್‌ಗ್ಲಾಸ್ ಬಳಸಿ ಈ ಪ್ರತಿಮೆಯನ್ನು ತಯಾರಿಸಲಾಗುತ್ತಿದೆ.

ಮುಂಬರುವ ಬುದ್ಧ ಪೂರ್ಣಿಮೆಯ ಮೊದಲು ಈ ಬೃಹತ್ ಪ್ರತಿಮೆಯನ್ನು ‘ಬುದ್ಧ ಇಂಟರ್‌ನ್ಯಾಷನಲ್ ವೆಲ್‌ಫೇರ್ ಮಿಷನ್’ ದೇವಸ್ಥಾನದಲ್ಲಿ ಅಳವಡಿಸಲಿದೆ. ಈ ಭಾಗಗಳನ್ನು ಬೋಧ್‌ಗಯಾಗೆ ತೆಗೆದುಕೊಂಡು ಹೋಗಿ ಅಲ್ಲಿ ಜೋಡಿಸಲಾಗುವುದು ಎಂದು ಕಲಾವಿದರಾದ ಮಿಂತು ಪಾಲ್ ಗುರುವಾರ ತಿಳಿಸಿದ್ದಾರೆ.
2015ರಲ್ಲಿ ಪಾಲ್ 80 ಅಡಿ ಎತ್ತರದ ದುರ್ಗೆಯ ಮೂರ್ತಿಯನ್ನು ತಯಾರಿಸಿದ್ದರು. ಇದು ವಿಶ್ವದಲ್ಲೇ ಅತಿ ಎತ್ತರದ ದುರ್ಗೆಯ ವಿಗ್ರಹ ಎಂದು ಖ್ಯಾತವಾಗಿತ್ತು.

Related