1.66 ಲಕ್ಷ ಜನರನ್ನು ಕೊಂದು ಹಾಕಿದ ಕೊರೋನಾ..!

1.66 ಲಕ್ಷ ಜನರನ್ನು ಕೊಂದು ಹಾಕಿದ ಕೊರೋನಾ..!

ವಾಷ್ಟಿಂಗ್ಟನ್/ರೋಮ್/ಮ್ಯಾಡ್ರಿಡ್, ಏ.20 :  ವಿನಾಶಕಾರಿ ಕೊರೊನಾ ಇಡೀ ಲೋಕಕ್ಕೆ ಕಂಟಕವಾಗಿಯೇ ಮುಂದುವದಿದ್ದು, ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ. ಜಗತ್ತಿನಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ದಿನನಿತ್ಯದ ಸುದ್ದಿಯಾಗುತ್ತಿದೆ. ಈವರೆಗೆ ಸುಮಾರು 1.66 ಲಕ್ಷ ಜನರನ್ನು ವೈರಸ್ ತಿಂದು ತೇಗಿದೆ.. ಅಲ್ಲದೇ ಸೋಂಕಿರ ಸಂಖ್ಯೆ 25 ಲಕ್ಷ ಸನಿಹದಲ್ಲಿದೆ. 42,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಯುರೋಪ್ ಖಂಡದಲ್ಲಿಯೂ ರಣಕೇಕೆ ಮುಂದುವರಿಸಿವೆ. ಯುರೋಪ್‍ನಲ್ಲಿ 40ಕ್ಕೂ ಹೆಚ್ಚು ರಾಷ್ಟ್ರಗಳು ಕೋವಿಡ್-19 ಹಾವಳಿಯಿಂದ ಬಾಧಿತವಾಗಿದ್ದು, ಸುಮಾರು 66,000 ಮಂದಿ ಬಲಿಯಾಗಿದ್ದು, 13 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಪ್ರವಾಸಿಗರ ಸ್ವರ್ಗ ಸೀಮೆ ಇಟಲಿಯಲ್ಲಿ ಸತ್ತವರ ಸಂಖ್ಯೆ 24,000 ದಾಟಿರುವುದು ಆತಂಕದ ಸಂಗತಿಯಾಗಿದೆ.

Related