ರಂಜಾನ್ ಆಚರಣೆ ಕುರಿತು ಶಾಂತಿ ಸಭೆ

ರಂಜಾನ್ ಆಚರಣೆ ಕುರಿತು ಶಾಂತಿ ಸಭೆ

ಗುಡಿಬಂಡೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬವನ್ನು ಆಚರಿಸುವ ಕುರಿತು ಶಾಂತಿ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ರಂಜಾನ್ ಹಬ್ಬವನ್ನು ಎಲ್ಲರೂ ತಮ್ಮ ಮನೆಯಲ್ಲಿಯೇ ಇದ್ದು ಆಚರಣೆ ಮಾಡಬೇಕು. ಕೊರೊನಾ ವೈರಸ್ ವ್ಯಾಪಕವಾಗಿರ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಮಸೀದಿ, ಮಂದಿರ, ಚರ್ಚ್‍ಗಳಲ್ಲಿ ಪೂಜೆ, ಪ್ರಾರ್ಥನೆಯನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿಕೊಳ್ಳಬೇಕು. ಯಾರು ಕೂಡ ಸಾಮೂಹಿಕ ಪ್ರಾರ್ಥನೆ ಮಾಡಲು ಮುಂದಾಗಬಾರದು. ಎಲ್ಲರೂ ಕೂಡ ಕೊರೊನಾ ಸೋಂಕು ತಡೆಗೆ ಸಹಕರಿಸಬೇಕೆಂದರು.

ನಂತರ ತಹಸೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ತಮ್ಮ ಮನೆಗಳಲ್ಲಿ ಇದ್ದು ಸುರಕ್ಷಿತವಾಗಿ ಹಬ್ಬವನ್ನು ಆಚರಣೆ ಮಾಡಿ. ಆಗ ಮಾತ್ರ ಸೋಂಕು ಹರಡದಂತೆ ತಡೆಗಟ್ಟಬಹುದು. ಸರ್ಕಾರದ ಜೊತೆ ಎಲ್ಲರೂ ಸಹಕರಿಸಿದಾಗ ಮಾತ್ರ ಕೋವಿಡ್-19 ವೈರಾಣುವನ್ನು ನಮ್ಮ ತಾಲ್ಲೂಕಿಗೆ ಬಾರದಂತೆ ನೋಡಿಕೊಳ್ಳಲು ಸಾಧ್ಯವೆಂದರು.
ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಮಸೀದಿಗಳ ಮುಖಂಡರುಗಳು, ಪಟ್ಟಣದ ಹಿರಿಯ ಮುಖಂಡರು ಹಾಜರಿದ್ದರು.

Related