ಮುಳವಾಡ ಏತ ನೀರಾವರಿ; ಬಾಂದಾರಕ್ಕೆ ನೀರು ಹರಿಸಿದ ಶಿವಾನಂದ ಪಾಟೀಲ

ಮುಳವಾಡ ಏತ ನೀರಾವರಿ; ಬಾಂದಾರಕ್ಕೆ ನೀರು ಹರಿಸಿದ ಶಿವಾನಂದ ಪಾಟೀಲ

ಬಸವನಬಾಗೇವಾಡಿ: ಮುಳವಾಡ ಏತ ನೀರಾವರಿ ಯೋಜನೆಯ ಕುದರಿಸಾಲವಾಡಗಿ ಶಾಖಾ ಕಾಲುವೆಯ ಹಳ್ಳದ ಮೂಲಕ ಸಮೀಪದ ಹೋರಿ ಮಟ್ಟ ಗುಡ್ಡದ ಸಮೀಪದ ಬಾಂದಾರಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಶಿವಾನಂದ ಪಾಟೀಲ ಗುರುವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಕೂಡಗಿ ರೈಲ್ವೆ ಸ್ಟೇಶನ್ ಸಮೀಪದ ಮುಖ್ಯ ಕಾಲುವೆ ಮೂಲಕ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಗೆ ಬರುವ ಜಿಲ್ಲೆಯ 97 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಇದರಿಂದ ಮುಳವಾಡ ಏತ ನೀರಾವರಿ ವ್ಯಾಪ್ತಿಯಲ್ಲಿ ಬರುವ 61 ಮತ್ತು ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಗೆ ಬರುವ 36 ಕೆರೆಗಳು ಸೇರಿದಂತೆ ಜಿಲ್ಲೆಯ ಒಟ್ಟು 97 ಕೆರೆಗಳಿಗೆ ನೀರು ದೊರೆಯಲಿದೆ. ತೀವ್ರ ಬೇಸಿಗೆಯಲ್ಲಿ ಕಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರೇಮಠದ ಶಿವಪ್ರಕಾಶ ಹಾಗೂ ಸಿದ್ದಲಿಂಗ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಗಣ್ಯ ವ್ಯಾಪಾರಿಗಳಾದ ಭರತ ಅಗರವಾಲ, ಹರೀಶ ಅಗರವಾಲ,ಪುರಸಭೆ ಸದಸ್ಯ ಅಶೋಕ ಹಾರಿವಾಳ, ರೈತ ಮುಖಂಡ ಅರವಿಂದ ಕುಲಕರ್ಣಿ, ಸಿದ್ಧರಾಮ ಅಂಗಡಗೇರಿ, ಸಿದ್ಧಪ್ಪ ನಡಕಟ್ಟಿ, ಹಾಲುಮತ ಸಮಾeದ ಮುಖಂಡ ಸಂಗಮೇಶ ಓಲೇಕಾರ ಸೇರಿದಂತೆ ಅನೇಕ ಮುಖಂಡರು ಹಾಗೂ ರೈತರು ಇದ್ದರು.

Related