ಕಟ್ಟಡದಿಂದ ಜಿಗಿದು ಕೊರೊನಾ ರೋಗಿ ಆತ್ಮಹತ್ಯೆ

ಕಟ್ಟಡದಿಂದ ಜಿಗಿದು ಕೊರೊನಾ ರೋಗಿ ಆತ್ಮಹತ್ಯೆ

ಬೆಂಗಳೂರು: ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೊರೊನಾ ರೋಗಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಕ್ಟೋರಿಯಾ ಟ್ರಾಮಾ ಸೆಂಟರ್‍ನಲ್ಲಿ ನಡೆದಿದೆ.

50 ವರ್ಷದ ರೋಗಿ ಸಂಖ್ಯೆ 466 ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ವಿವಿ ಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಈ ವ್ಯಕ್ತಿ ಬೆಂಗಳೂರು ತಿಲಕ್ ನಗರ ನಿವಾಸಿಯಾಗಿದ್ದು ಅಣ್ಣನ ಮನೆಯಲ್ಲಿ ನೆಲೆಸಿದ್ದ ಎನ್ನುವುದು ತಿಳಿದು ಬಂದಿದೆ. ರೋಗಿ ಆಟೋ ಚಾಲಕನಾಗಿ ಕೆಲಸ ,ಮಾಡುತ್ತಿದ್ದ. ಈತನಿಗೆ ಕಿಡ್ನಿ ವೈಫಲ್ಯವಿದ್ದು ಡಯಾಲಿಸಿಸ್ ಭಾನುವಾರ ನಡೆದಿತ್ತು ಎನ್ನಲಾಗಿದೆ.

Related