ಒಂದೇ ದಿನ 6500 ಕಿಟ್ ವಿತರಿಸಿದ ಬಡವರ ಸಂಜಿವೀನಿ ಶಾಸಕ ನಡಹಳ್ಳಿ

ಒಂದೇ ದಿನ 6500 ಕಿಟ್ ವಿತರಿಸಿದ ಬಡವರ ಸಂಜಿವೀನಿ ಶಾಸಕ ನಡಹಳ್ಳಿ

ಮುದ್ದೇಬಿಹಾಳ : ಜಗತ್ತನ್ನೇ ನಡುಗಿಸಿರುವ ಕೋವಿಡ್-19 ವೈರಸ್‍ನಿಂದ ಸಂಕಷ್ಟಕ್ಕೀಡಾಗಿರುವ ಬಡವರಿಗೆ ತುತ್ತು ಅನ್ನಕ್ಕೂ ಪರದಾಡುವಂತಾಗಿದ್ದು, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪಟ್ಟಣ ಪ್ರದೇಶದ ಕಡು ಬಡವರಿಗೆ ದಿನಸಿ ಸಾಮಗ್ರಿಯನ್ನು ವಿತರಿಸುವ ಕಾರ್ಯ ಮಾಡಿದ್ದಾರೆ.

ಮಂಗಳವಾರ  ಒಂದೇ ದಿನ ನಗರದ ವಿವಿಧ ವಾರ್ಡಗಳಲ್ಲಿ ಅಂದಾಜು 6500 ಸಾವಿರ  ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡೇ ಶಾಸಕರು ತಮ್ಮ ಸ್ವಂತ ಖರ್ಚಿನಿಂದಲೇ ಕಿಟ್ ವಿತರಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಪೊಲೀಸ್, ಆಶಾ, ಆರೋಗ್ಯ, ಪೌರಕಾರ್ಮಿಕರಿಗೆ ಶಾಸಕರ ಸೆಲ್ಯೂಟ್

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಪೊಲೀಸ್,ಆಶಾ ,ಆರೋಗ್ಯ ಹಾಗೂ ಪೌರಕಾರ್ಮಿಕರು, ವೈದ್ಯರ  ಸೇವೆಯನ್ನು ಕೊಂಡಾಡಿರುವ ಶಾಸಕ ನಡಹಳ್ಳಿ ಅಭಿನಂದನೆ ಸಲ್ಲಿಸಿದರು

ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ದಿನಸಿ ಕಿಟ್

ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಿರುವ ನಿಮ್ಮ ಬೆನ್ನಿಗೆ ನಾನಿದ್ದೇನೆ.ಯಾವುದಕ್ಕೂ ಜಗ್ಗದೇ ಕರೊನಾ ವೈರಸ್ ನಮ್ಮ ತಾಲೂಕಿನಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಮತಕ್ಷೇತ್ರದಲ್ಲಿರುವ ಜನರ ಆರೋಗ್ಯವನ್ನು ಕಾಪಾಡುವ ಆಶಾ,ಆರೋಗ್ಯ,ಪೊಲೀಸ್, ಪೌರಕಾರ್ಮಿಕರ ಕುಟುಂಬಕ್ಕೆ ದಿನಸಿಯನ್ನು ತಮ್ಮ ಸ್ವಂತ ಖರ್ಚಿನಿಂದ ತಲುಪಿಸುವುದಾಗಿ  ಹೇಳಿದ ಶಾಸಕರು, ಎಲ್ಲರಿಗೂ ಗುಣಮಟ್ಟದ ಮಾಸ್ಕ್ ಕೂಡಾ ನೀಡುತ್ತಿರುವುದಾಗಿ ಹೇಳಿದರು.

ತೆಲಂಗಾಣದ ಕಾರ್ಮಿಕರಿಗೆ ಕಿಟ್

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಬೀಡು ಬಿಟ್ಟಿರುವ ತೆಲಂಗಾಣದ ಅಂದಾಜು 25 ಕುಟುಂಬಗಳಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ದಿನಸಿ ಕಿಟ್ ವಿತರಿಸಿದರು. ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ ತಲಾ 25 ಕೆಜಿ ಅಕ್ಕಿಯನ್ನು ಬಡ ಕುಟುಂಬಗಳಿಗೆ ನೀಡಿದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ,ಅವರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ,  ತಹಸೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಗ್ಮೋಡೆ, ಮುಖ್ಯಾಧಿಕಾರಿ ಗೋಪಾಲ ಕಾಸೆ,ಡಾ.ಸತೀಶ ತಿವಾರಿ,ಆಯಾ ವಾರ್ಡ ಜನಪ್ರತಿನಿಧಿಗಳು,ಪುರಸಭೆ ಸದಸ್ಯರು,ಬಿಜೆಪಿ ಕಾರ್ಯಕರ್ತರು,ಶಾಸಕ ನಡಹಳ್ಳಿ ಅಭಿಮಾನಿಗಳು ಜೊತೆಗಿದ್ದರು.

Related