ಮೈಸೂರು-ಕೊಡಗು ಕ್ಷೇತ್ರದಲ್ಲಿ​ ಒಡೆಯರ್ ಗೆಲುವು ಖಚಿತ..!

ಮೈಸೂರು-ಕೊಡಗು ಕ್ಷೇತ್ರದಲ್ಲಿ​ ಒಡೆಯರ್  ಗೆಲುವು ಖಚಿತ..!

ಮೈಸೂರು-ಕೊಡಗು: ಮೈಸೂರು ಮತ್ತು ಕೊಡುವ ಕ್ಷೇತ್ರದಲ್ಲಿ ಈ ಬಾರಿ ಜಾತಿ ಲೆಕ್ಕಾಚಾರ ಕಾಂಗ್ರೆಸ್‌ ಪಕ್ಷವನ್ನು ಕೈಹಿಡಿಯದೆ ರಾಜರ ವಂಶದ ಕುಡಿ ಯದುವೀರ್​ ಒಡೆಯರ್ ಬಿಜೆಪಿ ಪಕ್ಷದ ಅಭ್ಯರ್ಥಿಯ ಮೈಸೂರು-ಕೊಡಗು ಜನತೆ ಕೈಹಿಡಿಯಲಿದ್ದಾರೆ.

ಹೌದು, ಮೊದಲನೇ ಸುತ್ತಿನ ಮತ ಎಣಿಕೆಯಿಂದಲೇ ಯದುವೀರ್​ ಒಡೆಯರ್ ಅವರು ಬಹುಮತ ಅಂತರಗಳಲ್ಲಿದ್ದಾರೆ ಹಾಗಾಗಿ ಈ ಬಾರಿ ಮೈಸೂರು, ಕೊಡಗು ಕ್ಷೇತ್ರಗಳಲ್ಲಿ ರಾಜ್ಯದ ವಂಶದ ಕುಡಿ ಅಧಿಕಾರದ ಗದ್ದಿಗೆ ಏರಲಿದ್ದಾರಾ ಎಂಬ ಕುತೂಹಲ ಎಲ್ಲಾ ಮೈಸೂರು ಕೊಡಗು ಜನತೆಗೆ ಎದುರಾಗಿದೆ.

ಇದೇ ಮೊದಲ ಬಾರಿಗೆ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿರುವ ರಾಜವಂಶದ ಕುಡಿ ಯದುವೀರ್ ಒಡೆಯರನ್ನು ಕ್ಷೇತ್ರದ ಜನತೆ ಕಹಿಡಿಯಲಿದ್ದಾರೆ. ಈಗಾಗಲೇ ಬಹುಮತಗಳ ಅಂತರದಲ್ಲಿ ಮುನ್ನಡೆಯುತ್ತಿರುವ ಯದುವೀರ್ ಅವರ ಗೆಲುವು ಬಹುತೇಕ ಖಚಿತವಾಗಿದೆ.

ಲೋಕಸಭಾ ಕ್ಷೇತ್ರ ಈ ಬಾರಿ ಭಾರೀ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಮೈಸೂರು-ಕೊಡಗು ಒಂದು. ಈ ಬಾರಿ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಬಿಜೆಪಿಯ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೇ ಈ ಬಾರಿಯೂ ಟಿಕೆಟ್ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಯದುವೀರ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು. ಇದು ಈ ಭಾಗದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನವನ್ನೂ ಉಂಟುಮಾಡಿತ್ತು. ಯದುವೀರ್ ಒಡೆಯರ್ ಅವರ ಎದುರಾಳಿಯಾಗಿ ಕಾಂಗ್ರೆಸ್​ನಿಂದ ಎಂ. ಲಕ್ಷಣ್ ಸ್ಪರ್ಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ದಕ್ಷಿಣದಲ್ಲಿ ಈ ಬಾರಿಯೂ ತೇಜಸ್ವಿ ಸೂರ್ಯ ಗೆಲ್ತಾರಾ..?

2009ರ ಚುನಾವಣೆಯಲ್ಲಿ ಕೊಡಗು ಜಿಲ್ಲೆಯನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು. ಮೈಸೂರು- ಕೊಡಗು ಕ್ಷೇತ್ರದಲ್ಲಿ ನಡೆದಿರುವ ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಅತಿ ಹೆಚ್ಚು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೈಸೂರು ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 4 ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದರು. ಈ ಬಾರಿ ಯದುವೀರ್ ಒಡೆಯರ್ ಸ್ಪರ್ಧಿಸಿದ್ದು, ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.

 

Related