ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಇಲಾಖೆಯಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿಗಳನ್ನ ಸಚಿವ ರಾಮಲಿಂಗ ರೆಡ್ಡಿ ಅವರು ಮಾಡಿದ್ದಾರೆ. ಅದರಂತೆ ಮತ್ತೆ ಇದೀಗ ಮುಜರಾಯಿ ಇಲಾಖೆಯನ್ನು ಕೂಡ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.
ಹೌದು, ರಾಜ್ಯದಲ್ಲಿ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಇನ್ಮುಂದೆ ಸರ್ಕಾರದ ಆದೇಶದಂತೆ ರಾಜ್ಯದ ಸಂಚಿತ ನಿಧಿಯಿಂದಲೇ ವೇತನ ಮತ್ತು ಭತ್ಯೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಧಾರ್ಮಿಕ ದತ್ತಿಯ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಉಲ್ಲೇಖಿತ(1)ರ ಪ್ರಸ್ತಾವನೆ ಕುರಿತು, ಉಲ್ಲೇಖಿತ(2)ರ ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 131 ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ಯೆಗಳನ್ನು ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಪಾವತಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ರಾಜೀವ್ ಗೌಡ ಕ್ಷೇತ್ರಕ್ಕೆ ದುಡಿಯುವ ಶ್ರಮಜೀವಿ
ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 131 ಅಧಿಕಾರಿ/ಸಿಬ್ಬಂದಿಗಳ ವೇತನಕ್ಕೆ ಅನುದಾನವನ್ನು ಲೆಕ್ಕ ಶೀರ್ಷಿಕೆ:2250-00-102-4-00 ಹಿಂದೂ ಧಾರ್ಮಿಕ ಸಂಸ್ಥೆಗಳು & ಧರ್ಮಾದಾಯ ದತ್ತಿಗಳು ಅಡಿ ಒದಗಿಸಲಾಗುವುದು. DDO ರವರು ಈ ಲೆಕ್ಕಶೀರ್ಷಿಕೆ ಅನ್ನು ಮ್ಯಾಪ್ ಮಾಡಿಕೊಳ್ಳುವಂತೆ ಹಾಗೂ ಈ ಅಧಿಕಾರಿ ಸಿಬ್ಬಂದಿಗಳ ವಿವರಗಳನ್ನು HRMS ನಲ್ಲಿ ದಾಖಲಿಸುವಂತೆ ತಿಳಿಸಿದೆ. ಈ ರೀತಿ ಮ್ಯಾಪ್ ಮಾಡಿ HRMS ಪುಕ್ರಿಯೆ ಮುಗಿದ ನಂತರ ಹೆಚ್ಚುವರಿ ಅನುದಾನದ ಅಗತ್ಯತೆಯನ್ನು ಅಂದಾಜು ಮಾಡಿ 2025-26 ನೇ ಸಾಲಿನ ಏಪ್ರಿಲ್-ಮೇ ರಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಪುನರ್-ವಿನಿಯೋಗದ ಮೂಲಕ ಹೆಚ್ಚುವರಿ ಒದಗಿಸಲಾಗುವುದೆಂದು ಆರ್ಥಿಕ ಇಲಾಖೆಯು ತಿಳಿಸಿರುತ್ತದೆ ಎಂದು ಹೇಳಿದ್ದಾರೆ.
ಆರ್ಥಿಕ ಇಲಾಖೆಯು ಸೂಚಿಸಿರುವಂತೆ ಜರೂರಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಮತ್ತು ಈ ಹೆಚ್ಚುವರಿ ಅನುದಾನದ ಅಗತ್ಯತೆಯನ್ನು ಅಂದಾಜು ಮಾಡಿ 2025-26 ನೇ ಸಾಲಿನ ಏಪ್ರಿಲ್-ಮೇ ರಲ್ಲಿ ಆರ್ಥಿಕ ಇಲಾಖೆಗೆ ಪುಸ್ತಾವನೆಯನ್ನು ಸಲ್ಲಿಸಲು ಅನುವಾಗುವಂತೆ ಪೂರ್ಣವಿವರಗಳೊಂದಿಗೆ ಮಾಹಿತಿ ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.