ಸಂಕನೂರ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆಯರು

  • In State
  • October 2, 2022
  • 320 Views
ಸಂಕನೂರ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆಯರು

ಕೊಪ್ಪಳ, 02: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ ರಾತ್ರಿ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ನಾಲ್ವರು ಮಹಿಳೆಯರು ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ನಿತ್ಯವೂ ಹತ್ತಾರು ಜನರು ಸಮೀಪದ ಹತ್ತಿ ಜೀನ್ ಗೆ ಕೆಲಸಕ್ಕೆ ತೆರಳುತ್ತಾರೆ. ಎಂದಿನಂತೆ ಇವರೂ ತೆರಳಿದ್ದಾರೆ. ಆದರೆ ಸಂಜೆ 7ರ ಸರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಗ್ರಾಮದ ಸಂಕನೂರು ಹಳ್ಳ ಭರ್ತಿಯಾಗಿ ಹರಿದಿದೆ. ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಮಹಿಳೆಯರು ನೀರಿಗೆ ಇಳಿದಿದ್ದಾರೆ, ನೀರಿನ ರಭಸಕ್ಕೆ ತಕ್ಷಣವೇ ಇಬ್ಬರು ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಣೆ‌ ಮಾಡಲು ಮತ್ತೆ ಇಬ್ಬರು ಹಳ್ಳದಲ್ಲಿ ಇಳಿದಿದ್ದಾರೆ. ಅವರೂ ಸಹ ನೀರಿನ ಸೆಳೆತಕ್ಕೆ ಸಿಲುಕಿ, ಒಂದು ಗಂಟೆ ಕಾಲ ಗಿರಿಜಾ ಹಾಗೂ ಭುವನೇಶ್ವರಿ ಎನ್ನುವ ಇಬ್ಬರು ರಭಸಕ್ಕೆ ಮಹಿಳೆಯರು ಹಳ್ಳದ ಮಧ್ಯೆ ಗಿಡದ ಟೊಂಗೆ ಹಿಡಿದುಕೊಂಡು ಗ್ರಾಮಸ್ಥರ ಸಹಾಯಕ್ಕಾಗಿ ಕೂಗಿದಾಗ, ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ರಕ್ಷಣೆ ಮಾಡಲು ಹಗ್ಗ, ಏಣಿ ಸೇರಿದಂತೆ ಇತರೆ ಪ್ರಯತ್ನ ಮಾಡಿದ್ದಾರೆ. ಆದರೆ, ನೀರಿ‌ನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗಿಡದ ಟೊಂಗೆ ಹಿಡಿದು ನಿಂತಿದ್ದ ಮಹಿಳೆಯರು ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕಳೆದ ರಾತ್ರಿ ಸಂಕನೂರು ಗ್ರಾಮದ ಹೊರವಲಯದ ಹಳ್ಳದಲ್ಲಿ ಗಿರಿಜಾ ಮಾಲಿ ಪಾಟೀಲ್(40), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45), ವೀಣಾ ಮಾಲಿ ಪಾಟೀಲ್(19) ಎಂಬ ನಾಲ್ವರು ಕೊಚ್ಚಿಕೊಂಡು ಹೋಗಿದ್ದಾರೆ.
ನಾಲ್ವರು ಮಹಿಳೆಯರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿವೆ.
4 ಜನರಲ್ಲಿ, 3ಜನರ ಮೃತ ದೇಹ ಪತ್ತೆಯಾಗಿದ್ದು, ಇನ್ನೊಂದು ಮೃತ ದೇಹಕ್ಕಾಗಿ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ಮುಂದುವರೆದಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ, ತಕ್ಷಣವೇ ಗ್ರಾಮಕ್ಕೆ ತಹಶೀಲ್ದಾರ ಶ್ರೀಶೈಲ್ ತಳವಾರ, ಯಲಬುರ್ಗಾ ಸಿಪಿಐ, ಪಿಎಸ್ಐ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

Related