ನಾನು ಜೈಲಿನಲ್ಲಿರುವ ದರ್ಶನ್ ಮದುವೆ ಆಗುತ್ತೇನೆ ಎಂದ ಮಹಿಳೆ

ನಾನು ಜೈಲಿನಲ್ಲಿರುವ ದರ್ಶನ್ ಮದುವೆ ಆಗುತ್ತೇನೆ ಎಂದ ಮಹಿಳೆ

ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಇದೀಗ ಬಳ್ಳಾರಿ ಕಾರ್ಯಗ್ರಹ ಜೈಲು ಸೆರೆವಾಸವನ್ನು ಅನುಭವಿಸುತ್ತಿದ್ದಾರೆ.

ಇನ್ನು ಬಳ್ಳಾರಿ ಜೈಲಿನಲ್ಲಿರುವ ದಾಸನನ್ನು ನೋಡಲು ಕೇವಲ ಕುಟುಂಬದವರಿಗೆ ಮಾತ್ರ ಅವಕಾಶ ಇದೆ ಎಂದು ಈಗಾಗಲೇ ಪೊಲೀಸ್ ಅಧಿಕಾರಿಗಳು ಮಾಹಿತಿ ಹೊರಡಿಸಿದ್ದಾರೆ.

ಹೀಗಿದ್ದರೂ ಕೂಅಡ ಬಳ್ಳಾರಿ ಸೆಂಟ್ರಲ್ ಜೈಲು ಎದುರುಗಡೆ ಮಹಿಳೆ ಒಬ್ಬರು ನಾನು ನಟ ದರ್ಶನ್ ನೋಡಬೇಕು ಎಂದು ಹೈಡ್ರಾಮವನ್ನೇ ಸೃಷ್ಟಿಸಿದ್ದಾರೆ.

ಹೌದು, ನಟ ದರ್ಶನ್ ನೋಡ್ಬೇಕು, ಮಾತಾಡ್ಬೇಕು ಎಂದು ಜೈಲಿನ ಬಳಿ ಬರುವ ಅಭಿಮಾನಿಗಳು ಬಳ್ಳಾರಿಯಲ್ಲಿಯೂ ಇದ್ದಾರೆ. ಈ ಮಧ್ಯೆ ಬಳ್ಳಾರಿ ಜೈಲಿನ ಬಳಿ ಬೆಂಗಳೂರಿನ ಅವರ ಅಭಿಮಾನಿ ಮಹಿಳೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದು ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ. ದರ್ಶನ್ ನೋಡಲು ಜೈಲೊಳಗೆ ಬಿಡಿ, ಅವರ ಕುಟುಂಬ ಸದಸ್ಯರನ್ನು ಮಾತ್ರ ಬಿಡ್ತೀವಿ ಅಂತ ನೀವು ಹೇಳೊದಾದ್ರೆ ಅವರನ್ನು ಮದುವೆಯಾಗಲೂ ರೆಡಿಯಿದ್ದೇನೆ ಬೇಕಿದ್ರೆ ಎಂದು ಮಹಿಳೆ ಹೇಳಿದಾಗ ಪೊಲೀಸರು ತಬ್ಬಿಬ್ಬಾಗಿದ್ದಾರೆ. ಇದನ್ನೂ ಓದಿ:ರೇಣುಕಾ ಸ್ವಾಮಿ ಅಂಗಲಾಚಿ ಬೇಡುತ್ತಿರುವ ಫೋಟೋ ವೈರಲ್

ದರ್ಶನ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಲಕ್ಷ್ಮಿಗೆ ದರ್ಶನ್ ನೋಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಇದೀಗ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಿರುವ ಅಭಿಮಾನಿ ಲಕ್ಷ್ಮೀ, ನಾನು ದರ್ಶನ್ ರನ್ನ ನೋಡಬೇಕು ಎಂದು ಜೈಲು ಸಿಬ್ಬಂದಿ ಜೊತೆ ವರಾತ ತೆಗೆದಿದ್ದಾಳೆ.

ನನಗೆ ದರ್ಶನ್ ಇಷ್ಟ, ವಿಜಯಲಕ್ಷ್ಮೀ ರೀತಿಯಲ್ಲಿ ನಾನು ಮದುವೆಯಾಗುತ್ತೇನೆ. ಒಳಗೆ ಬಿಡಿ ನಾನು ದರ್ಶನ್ ನೋಡಲೇಬೇಕು. ಬೆಂಗಳೂರು ಜೈಲಿಗೆ ಹೋದ್ರೆ ಅಲ್ಲೂ ಬಿಡ್ಲಿಲ್ಲ. ಬಳ್ಳಾರಿಗೆ ಬಂದ್ರೆ ಇಲ್ಲೂ ಬಿಡಲ್ಲ ಅಂದ್ರೆ ಹೇಗೆ? ಎಂದು ಜೈಲು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಳೆ.

ದರ್ಶನ್ ಬೇಕಂದರೆ ನಾನು ಹೋಗಿ ಚಿಕನ್, ಮಟನ್ ಮಾಡಿಸಿಕೊಂಡು ಅವರಿಗೋಸ್ಕರ ತಂದು ಕೊಡುತ್ತೇನೆ ನನ್ನನ್ನು ದರ್ಶನ್ ಭೇಟಿ ಮಾಡಲು ಬಿಡಿ ಎಂದು ಹೇಳಿದ್ದಾರೆ.

 

Related