ಕಬ್ಬಿನ ತಂತ್ರಕ್ಕೆ ಬೂರ್ಕಾ ಸಿಲುಕಿ ಮಹಿಳೆ ಸಾವು..!!

  • In Crime
  • July 6, 2022
  • 340 Views
ಕಬ್ಬಿನ ತಂತ್ರಕ್ಕೆ ಬೂರ್ಕಾ ಸಿಲುಕಿ ಮಹಿಳೆ ಸಾವು..!!

ಕೋಲಾರ: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಬುರ್ಕಾ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆಯ 3ನೇ ಅಡ್ಡ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಕೌಸರ್ ಬೇಗ್(37) ಮೃತ ಮಹಿಳೆ. ಕೌಸರ್ ಬೇಗ್ ಮಂಗಳವಾರ ಮುಂಜಾನೆ ತಮ್ಮದೆ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಗೆ ಬಂದಿದ್ದಳು.

ಈ ವೇಳೆ ಕೌಸರ್ ಬೇಗ್ ಧರಿಸಿದ್ದ ಬುರ್ಕಾ ಕಬ್ಬಿನ ಯಂತ್ರಕ್ಕೆ ಸಿಲುಕಿದ್ದು, ಅದನ್ನು ತೆಗೆಯಲಾದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.  ಸ್ಥಳಕ್ಕೆ ರಾಬರ್ಟ್ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Related