ಹಾರೋಹಳ್ಳಿ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಯಲ್ಲಿ ಓ ಎಫ್ ಸಿ ಕೇಬಲ್ ಅಳವಡಿಕೆ ನೆಪದಲ್ಲಿ ಗುತ್ತಿಗೆದಾರನಿಗೆ ಹಣ ನೀಡುವಂತೆ ಬೇಡಿಕೆ ಇಟ್ಟ ಆರೋಪದಲ್ಲಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿ ಶ್ವೇತಾಬಾಯಿಯವರನ್ನು ಕೂಡಲೇ ಜಾರಿಗೆ ಬರುವಂತೆ ಪೌರಾಡಳಿತ ನಿರ್ದೇಶನಾಲಯ ಅಮಾನತು ಆದೇಶ ಹೊರಡಿಸಿದೆ.
ಪಟ್ಟಣ ಪಂಚಾಯಿತಿ ಅಧಿಕಾರಿ ಜುಲೈ 20ರಂದು ಒ ಎಫ್ ಸಿ ಕೇಬಲ್ ಅಳವಡಿಕೆಗೆ ಗುತ್ತಿಗೆದಾರನಿಂದ ಒಂದು ಕಿಲೋಮೀಟರ್ ಗೆ ಕೇಬಲ್ ಅಳವಡಿಕೆಗೆ ಎರಡು ಲಕ್ಷ. ಎರಡು ಕಿಲೋಮೀಟರ್ ಗೆ ನಾಲ್ಕು ಲಕ್ಷ ಹಣ ನೀಡುವಂತೆ ಗುತ್ತಿಗೆದಾರನಿಗೆ ಬೇಡಿಕೆ ಇಟ್ಟ ವಿಡಿಯೋ ಸಂಭಾಷಣೆ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ. ವೈರಲ್ ಆದ ಕಾರಣ ಇಲಾಖೆ ವಿಚಾರಣೆಯನ್ನು ಕಾಯಿದಿರಿಸಿ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಶ್ರೀ ಪ್ರಭುಲಿಂಗ ಕವಳ ಕಟ್ಟೆ (ಬಾ .ಆ .ಸೇ) ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಶ್ವೇತಾಬಾಯಿ ಅವರನ್ನುಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.