ಶಹಾಪೂರ : ಮದುವೆಗೆಂದು ಬಂದಿದ್ದ ಯುವಕ ಮಸಣಕ್ಕೆ ಸೇರಿದ ಘಟನೆ ಭಾನುವಾರ ಜರುಗಿದೆ. ತಾಲೂಕಿನ ಹೋತಪೇಠ ಗ್ರಾಮದಲ್ಲಿ ಸ್ನೇಹಿತನ ಅಕ್ಕನ ಮದುವೆ ಗೆಂದು ಬಂದಿದ್ದ ಮೃತ ಶ್ರೀಶೈಲ್ (೨೨) ಡಿಪ್ಲೋಮ ವಿದ್ಯಾರ್ಥಿಯಾಗಿದ್ದು ಮೂಲತಃ ಧಾರವಾಡ ದವನಾಗಿದ್ದಾನೆ. ಸ್ನೇಹಿತನ ಸಹೋದರಿಯ ಮದುವೆಗೆಂದು ಹೋತಪೇಠ ಗ್ರಾಮಕ್ಕೆ ಬಂದಿದ್ದು ಅದೇ ಗ್ರಾಮದ ಬಾವಿಗೆ ಈಜಾಡಲು ಹೋಗಿದ್ದ ಯುವಕ ಈಜು ಬಾರದೇ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.