ಬೆಂಗಳೂರು: ನಟ ದರ್ಶನ್ ಚಿಕಿತ್ಸೆಗೆಂದು ಷರತ್ತುಬದ್ದ ಮಧ್ಯಂತರ ಜಾಮೀನು ಮೇಲೆ ಹೊರಗಡೆ ಬಂದು ಈಗಾಗಲೇ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 16 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಗೆ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗಾಗಲೇ ದರ್ಶನ್ ಗೆ ಪಿಸಿಯೋಥೆರಪಿ ಮಾಡಲಾಗುತ್ತಿದೆ. ಇದರ ಜೊತೆಗೆ ಆಪರೇಷನ್ ಕೂಡ ಅಗತ್ಯ ಎನ್ನಲಾಗ್ತಿದೆ. ಸದ್ಯ ದರ್ಶನ್ ಮೆಡಿಕಲ್ ಕಂಡೀಷನ್ ಅಬ್ಸರ್ವೇಷನ್ ನಲ್ಲಿ ಇಡಲಾಗಿದೆ. ಇದನ್ನೂ ಓದಿ: ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ: ಸಿಎಂ
ಮೊದಲಿಗೆ ನಟ ದರ್ಶನ್ ಸೇರಿ ಕುಟುಂಬಸ್ಥರು ಸಹ ಆಪರೇಷನ್ ಬದಲಿಗೆ ಪಿಸಿಯೋಥೆರಪಿಗೆ ಮನವಿ ಮಾಡಿದ್ದರು. ಆದರೆ ಬಳ್ಳಾರಿ ಜೈಲಿನಲ್ಲಿದ್ದುಕೊಂಡೇ ಪಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಆದರೆ ದರ್ಶನ್ ಗೆ ತುರ್ತು ಆಪರೇಷನ್ ಅಗತ್ಯವಿದೆ ಎಂದು ಹೈಕೋರ್ಟ್ ನಲ್ಲಿ ಬೇಲ್ ಪಡೆಯಲಾಗಿತ್ತು. ಹೀಗಾಗಿ ಜಾಮೀನಿನ ಮೇಲೆ ಹೊರಬಂದು, ಇದೀಗ ಪಿಸಿಯೋಥೆರಪಿ ಚಿಕಿತ್ಸೆಗೆ ಒಳಪಟ್ಟರೆ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಹಾಗಾಗಿ ಅನಿವಾರ್ಯವಿಲ್ಲದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿರುವ ಅನಿವಾರ್ಯತೆ ನಟ ದರ್ಶನ್ ಗೆ ಬಂದೊದಗಿದೆ.