ಬೆಂಗಳೂರು: ಅಹಮಬಾದ್ ನಲ್ಲಿ ವಿಮಾನ ದುರಂತದಿಂದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇನ್ನು ದುರಂತದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಗ್ರಹಿಸಿದ್ದಾರೆ.
ಗುಜರಾತ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ವಾಗಿರುವುದನ್ನು ತಿಳಿದು ಬಹಳ ಆಶ್ಚರ್ಯವಾಯಿತು. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಎಲ್ಲಾ ವಿಮಾನಗಳು ಉತ್ತಮವಾಗಿ ಸಂಚಾರ ನಡೆಸುತ್ತಿದ್ದವು. ಆದರೆ ಇಂದು ನಡೆದಿರುವ ದುರಂತಕ್ಕೆ ಮಹತ್ವವಾದ ಕಾರಣ ಏನೆಂದು ಇಲ್ಲಿವರೆಗೂ ಯಾರಿಗೂ ತಿಳಿದಿಲ್ಲ. ದುರಂತಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆಚ್ಚಿನ ವಿಚಾರಣೆ ಕೂಡ ನಡೆಯುತ್ತಿದೆ.
ಈ ದುರಂತದಲ್ಲಿ ಯಾವುದೇ ರೀತಿ ಹೆಚ್ಚಿನ ಸಾವು ನೋವಾಗಬಾರದೆಂದು ನಾನು ಆ ಭಗವಂತನಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ಈ ದುರಂತದ್ದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ತಾಂತ್ರಿಕ ದೋಷದಿಂದ ಪತನವಾಯಿತಾ ವಿಮಾನ?
ಕನ್ನಡ, ತೆಲುಗು, ಗುಜರಾತಿ ಎನ್ನುವ ಭಾವನೆ ಬೇಡ. ಎಲ್ಲರೂ ನಮ್ಮ ಜನ ನಮ್ಮ ದೇಶದ ಜನರು, ಎಲ್ಲರೂ ಮಾನವರು ಹಾಗಾಗಿ ಯಾರಿಗೂ ಯಾವುದೇ ರೀತಿ ತೊಂದರೆಯಾಗದಂತೆ ರಕ್ಷಣೆ ಯಾಗಬೇಕೆಂದು ಶಿವಕುಮಾರ್ ಅವರು ಹೇಳಿದ್ದಾರೆ.
