ಗುಂಡ್ಲುಪೇಟೆ: ಪಟ್ಟಣ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 5 ಮಂದಿ ಪುರಸಭಾ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಸಹಕರಿಸಿದ 5 ಮಂದಿ ಬಿಜೆಪಿ ಪಕ್ಷದ ಪುರಸಭಾ ಸದಸ್ಯರು ಗಳನ್ನು ಮಾನ್ಯ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಅನರ್ಹಗೊಳಿಸಿ ಅದೇಶ ಹೊರಡಿಸಿದ ಹಿನ್ನೆಲೆ ಪಟ್ಟಣದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ರು ಹಾಲಿ ಸದಸ್ಯರು ರಾದ ಪಿ.ಗಿರೀಶ್ ಮುಖಂಡತ್ವದಲ್ಲಿ ವಿಜಯೋತ್ಸವ ಅಚರಿಸಿ, ಪುರಸಭೆಯ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಭಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ರಾದ ಪಿ.ಗಿರೀಶ್, ರಾಜ್ಯದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದೆ, ಅಲ್ಲದೇ ಇಲ್ಲಿನ ಅಧಿಕಾರಿಗಳು ನಮ್ಮ ಕಾಂಗ್ರೇಸ್ ಪಕ್ಷದ ಅಧೀನದಲ್ಲಿ ಇದ್ದಾರೇ? ಎಂಬ ಶಾಸಕರ ಅಮಿಷಕ್ಕೆ ಬಲಿಬಿದ್ದು ಉದ್ಘಟತನದಿಂದ (ಅಧಿಕಾರ ಅಸೆಗಾಗಿ) ಪಕ್ಷಾಂತರ ಮಾಡಿದ್ದವರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಸದಸ್ಯತ್ವವನ್ನು ಅನರ್ಹಗೊಳಿಸಿ ತಕ್ಕಪಾಠ ಕಲಿಸಿದ್ದಾರೆ ಎಂದರು.
ನಮ್ಮ ಪಕ್ಷದಿಂದ ಪಕ್ಷಾಂತರ ಮಾಡಿರುವ 5 ಮಂದಿ ಸದಸ್ಯರುಗಳ ವಿರುದ್ಧ ದೂರು ಸಲ್ಲಿಸಿ ತುರ್ತಾಗಿ ಅವರ ಸದಸ್ಯತ್ವ ಅನರ್ಹಗೊಳಿಸಿ ಬೀದಿಗೆ ತರುವುದಾಗಿ ಹೇಳಿದ್ದೇ, ಅದನ್ನು ಈಗ ಮಾಡಿ ತೋರಿಸಿದ್ದೇನೆ, ಅದೇ ರೀತಿ ಮುಂದೆನೂ ಅವರು ಯಾವುದೇ ವಾಮ ಮಾರ್ಗದಲ್ಲಿ ಹೋದರು ಅವರನ್ನು ಬಿಟ್ಟುಕೊಡುವ ಮಾತೇ ಇಲ್ಲ. ನಾವು ಕೂಡ ಅವರುಗಳ ವಿರುದ್ದ ಹೋರಾಟ ಮಾಡೇ ಮಾಡುತ್ತೇವೆ ಎಂದರು.