ನೀರು ಹಂಚಿಕೆ ವ್ಯಾಜ್ಯ ಶೀಘ್ರದಲ್ಲೇ ಪರಿಹಾರ : ಬಿಎಸ್‌ವೈ

ನೀರು ಹಂಚಿಕೆ ವ್ಯಾಜ್ಯ ಶೀಘ್ರದಲ್ಲೇ ಪರಿಹಾರ : ಬಿಎಸ್‌ವೈ

ಆಲಮಟ್ಟಿ : ಕೃಷ್ಣಾ ನದಿ ನೀರು ಹಂಚಿಕೆ ಬಗ್ಗೆ ಅಂತರಾಜ್ಯದ ವ್ಯಾಜ್ಯವು ಸುಪ್ರೀಂಕೋರ್ಟಿನಲ್ಲಿದೆ, ವ್ಯಾಜ್ಯವು ಅತೀ ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಶಾಸ್ತಿç ಜಲಾಶಯದ ಬಲಬದಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಮಯೂರಕೃಷ್ಣ ಹೊಟೆಲನಲ್ಲಿ ಮಾತನಾಡಿದ ಅವರು ಈ ಕುರಿತು ಮುಖ್ಯಮಂತ್ರಿಗಳು ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಈಗಾಗಲೇ ಜನರಿಗೆ ತಿಳಿಸಿದ್ದಾರೆ ಎಂದರು.

ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ತಾಲೂಕುಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ. ತಾವು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವ ವೇಳೆಯಲ್ಲಿ ಬಂದಿರುವ ಕಣ್ಣೀರು ದುಃಖದ ಕಣ್ಣೀರಲ್ಲ ಅವು ಆನಂದ ಭಾಷ್ಪವಾಗಿವೆ. ತಾವು ಮುಖ್ಯಮಂತ್ರಿಯಾಗಲು ನಾಡಿನ ಜನರು ಆಶೀರ್ವಾದ ಮಾಡಿದ್ದರ ಪರಿಣಾಮವಾಗಿ ಹುದ್ದೆಯನ್ನು ಅಲಂಕರಿಸಿದ್ದೇನು, ತಮ್ಮ ಮೇಲೆ ರಾಜ್ಯದ ಜನರು ಇಟ್ಟಿರುವ ನಂಬಿಕೆಯನ್ನು ನೆನೆದು ಆನಂದ ಭಾಷ್ಪ ಹರಿದವು ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿಗಳು ಆಲಮಟ್ಟಿ ಲಾಲಬಹದ್ದೂರಶಾಸ್ತಿç ಜಲಾಶಯಕ್ಕೆ ಭೇಟಿ ನೀಡಿದರು.

ಈ ವೇಳೆ ಸಹಾಯಕ ಅಭಿಯಂತರ ವಿಠ್ಠಲ ಜಾಧವ ಅವರು ಮಾಜಿಮುಖ್ಯಮಂತ್ರಿಗಳಿಗೆ ಕೃ.ಮೇ.ಯೋಜನೆಯ ಹಂತ-3, ವಿದ್ಯುತ್ ಉತ್ಪಾದನೆಯ ಬಗ್ಗೆ ವಿವರಿಸಿದರು. ಆಲಮಟ್ಟಿ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಅವರು ಆಲಮಟ್ಟಿ ಪ್ರವಾಸಿ ತಾಣ ಅಭಿವೃದ್ಧಿಗೆ ಪೂರಕವಾಗಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮತ್ತು ಈ ಭಾಗದಲ್ಲಿ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಅಭಿವೃದ್ಧಿಯ ಬಗ್ಗೆ ವಿವರಿಸಿದರು.

ಈ ವೇಳೆ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಉಪಸ್ಥಿತರಿದ್ದರು.

Related