ವಾಲ್‌ನಟ್ ಸೇವನೆಯಿಂದ ಹಲವಾರು ಉಪಯೋಗಳು

ವಾಲ್‌ನಟ್ ಸೇವನೆಯಿಂದ ಹಲವಾರು ಉಪಯೋಗಳು

ಬೆಂಗಳೂರು: ಹಿಂದಿನ ಕಾಲದಿಂದಲೂ ಹಿರಿಯರು ಹಾಗೂ ವೈದ್ಯರು ಹೇಳಿರುವಂತೆ ಡ್ರೈ ಫ್ರೂಟ್ ಸೇವನೆಯಿಂದ ದೇಹಕ್ಕೆ ಹಲವಾರು ಲಾಭಗಳಿವೆ ಎಂದು ನಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿದಿನ ನಾವೆಲ್ಲರೂ ಡ್ರೈ ಫ್ರೂಟ್ಸ್ ಸೇವನೆ ಮಾಡಬೇಕು. ಡ್ರೈಫ್ರೂಟ್ಸ್ ಎಂದರೆ ಯಾವೆಲ್ಲಾ ಡ್ರೈ ಫ್ರೂಟ್ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಹೆಚ್ಚಳ ಲಾಭವಾಗುತ್ತದೆ ಎಂದು ನಾವಿಂದು ತಿಳಿಯೋಣ.

ಡ್ರೈ ಫ್ರೂಟ್ಸ್‌ ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದನ್ನು ಗಮನಿಸಿಯೇ ಇರುತ್ತೇವೆ. ಯಾವ ಡ್ರೈ ಫ್ರೂಟ್ಸ್​​ನಿಂದ ನಮಗೇನು ಪ್ರಯೋಜನ ಎಂದು ತಿಳಿದುಕೊಂಡರೆ ಒಳ್ಳೆಯದು. ಇವುಗಳಲ್ಲಿಯೇ ಒಂದಾದ ವಾಲ್‌ನಟ್​ ಅನ್ನು ಸೇವಿಸುವುದರಿಂದ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ವಿವಿಧ ರೀತಿಯ ಖನಿಜಾಂಶಗಳು, ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್​ಗಳನ್ನು ಹೊಂದಿರುವ ವಾಲ್‌ನಟ್‌ ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಎರಡು ವಾಲ್‌ನಟ್‌ಗಳನ್ನು ಪ್ರತಿದಿನ ತಪ್ಪದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ವಾಲ್‌ನಟ್‌ ಮೆದುಳಿನ ಕಾರ್ಯ ಮತ್ತು ಬೆಳವಣಿಗೆಗೆ ಅವಶ್ಯಕವಾಗಿರುವ ಕೊಬ್ಬಿನಾಮ್ಲಗಳನ್ನು ಒದಗಿಸುವುದರ ಜತೆಗೆ ಇದೊಂದು ಉತ್ತಮ ಆಹಾರ ಎಂದು ಕೆಲ ಅಧ್ಯಯನಗಳು ಹೇಳಿವೆ.

ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಇದು, ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತನಾಳಗಳ ವಿಶ್ರಾಂತಿ ಮತ್ತು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

 

Related