ಬೆಂಗಳೂರು: ರಾಜ್ಯ ಬಿಜೆಪಿ ಬಣದಲ್ಲಿ ಇದೀಗ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದ್ದು, ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಬಿ ವೈ ವಿಜಯೇಂದ್ರ ಅವರ ವಿರುದ್ಧ ಸಂಸದ ಡಾ. ಸುಧಾಕರ್ ಅವರು ಹಗುರವಾಗಿ ಮಾತನಾಡಿರುವುದರಿಂದ ಇದೀಗ ಸುಧಾಕರ್ ವಿರುದ್ಧ ಎಸ್ ಆರ್ ವಿಶ್ವನಾಥ್ ಅವರು ಕಿರಿಕರಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೇನು ದೊಡ್ಡ ನಲ್ಲ ನನಗೆ ಎಲ್ಲರನ್ನು ಅರ್ಥವಾಗುತ್ತೆ. ನಿಮ್ಮಂತಹವರು ಪಕ್ಷದಲ್ಲಿ ಇರುವುದಕ್ಕಿಂತ ಬಿಟ್ಟು ಹೋದರೇನೇ ಸುಧಾಕರ್ ವಿರುದ್ಧ ಶಾಸಕ ಎಸ್.ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಾಂಧೀಜಿಯವರ ಹೋರಾಟದ ಬದುಕು ಪ್ರೇರಣಾದಾಯಕ: ಸಿಎಂ
ಸುಧಾಕರ್ ಮೇಲೆ ವಿಧಾನಸೌಧದಲ್ಲಿ ಹಲ್ಲೆ ನಡೆದಾಗ ನಾನೇ ಹೋಗಿ ಬಚಾವ್ ಮಾಡಿದೆ. ಸುಧಾಕರ್ ಕೋವಿಡ್ ನಿರ್ವಹಿಸಿದ್ರು, ಸಮರ್ಥ ಸಚಿವ ಆಗಿದ್ದವರು. ಸಮರ್ಥ ಸಚಿವ ಅನಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರ ಯಾಕೆ ಸೋತ್ರಿ? ಚಿಕ್ಕಬಳ್ಳಾಪುರದಲ್ಲಿ ಒಳ್ಳೇ ಕೆಲಸ ನೀವು ಮಾಡಿದ್ರೆ ಜನ ಯಾಕೆ ನಿಮ್ಮನ್ನ ಸೋಲಿಸ್ತಿದ್ರು? ಎಂದು ಪ್ರಶ್ನಿಸಿದರು.
ಎಂಪಿ ಸ್ಥಾನದ ಟಿಕೆಟ್ ಸಿಗಲ್ಲ ಅಂತಾದಾಗ ಏನೇನು ಮಾತಾಡಿದ್ರಿ? ಕಾಂಗ್ರೆಸ್‌ನವರ ಜೊತೆ ಆಗ ನೀವು ಮಾತಾಡಲಿಲ್ಲವಾ? ಆಗ ನಿಮಗೆ ಪಕ್ಷ ನಿಷ್ಠೆ ಇತ್ತಾ? ನೀವು ಕಾಂಗ್ರೆಸ್ ಜೊತೆಗೆ ಮಾತಾಡಲಿಲ್ಲ ಅಂದ್ರೆ ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡ್ತೀನಿ ಅಂತ ಸುಧಾಕರ್‌ಗೆ ಸವಾಲ್ ಹಾಕಿದ್ದಾರೆ.