ಆರೋಗ್ಯ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ: ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ, ಖಾಲಿ ಇರುವ ಹುದ್ದೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಜೊತೆ ನಾವು ಚರ್ಚಿಸಿದ್ದೇವೆ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವರಾಗಿರುವಂತಹ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಲಾಯಕ್ ಎನ್‌ಡಿಎ ಸಂಸದರಿಂದ ರಾಜ್ಯಕ್ಕೆ 1 ರೂ. ತರಲು ಆಗಿಲ್ಲ: ಮೋಹನ್ ದಾಸರಿ

ಇದೇ ವೇಳೆ ಇಡಿ ಅಧಿಕಾರಿಗಳ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್​ ತಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದು, ಆ ಅಧಿಕಾರಿ ಯಾರು, ಏನು ಅಂತಾ ನಮಗೆ ಗೊತ್ತಿಲ್ಲ. ಅಧಿಕಾರಿ ಕಲ್ಲೇಶ್​​ರನ್ನು ಇಡಿ ಅಧಿಕಾರಿಗಳೇ ಕರೆಸಿಕೊಂಡಿದ್ದಾರೆ. ಆ ಅಧಿಕಾರಿ ಭ್ರಷ್ಟಾಚಾರ ಮಾಡಿದ್ದಾರೋ ಇಲ್ವೋ ಬೇರೆ ವಿಚಾರ. ಮೊನ್ನೆ ದೂರು ಕೊಡುವ ಮೊದಲೇ ಇಡಿ ಏನು ಅಂತ ಹೇಳಿದ್ದೀವಿ. ಇಡಿಯವರು ಹಲವರಿಗೆ ಒತ್ತಡ ಹಾಕಿದ್ದಾರೆ, ನಮ್ಮ ಬಳಿ ಮಾಹಿತಿ ಇದೆ.

ಸಿಎಂ, ಮಂತ್ರಿಗಳ ಹೆಸರು ಹೇಳುವಂತೆ ಒತ್ತಡಹಾಕಿ ಸಿಲುಕಿಸಲು ಯತ್ನ ನಡೆದಿದೆ. ಬೇರೆಯವರ ಮೇಲೂ ಒತ್ತಡ ಹಾಕಲಾಗಿದೆ, ಯಾರೂ ದೂರು ಕೊಟ್ಟಿಲ್ಲ. ವಿಪಕ್ಷಗಳು ಏನಾದರೂ ಹೇಳಿಕೊಳ್ಳಲಿ, ಇಡಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಡಿ ಅಧಿಕಾರಿಗಳು ಬಿಜೆಪಿ ಪರ ಇದ್ದಾರೆ. ಸಿಬಿಐ, ಎಸ್​ಐಟಿ ಇರುವಾಗ ಇಡಿ ಬರುವ ಅವಶ್ಯಕತೆ ಏನಿತ್ತು? ನಾಗೇಂದ್ರ ಹೆಸರು ಸಿಬಿಐ ಹಾಗೂ‌ ಎಸ್​​ಐಟಿನಲ್ಲಿ‌ ಎಲ್ಲೂ ಇರಲಿಲ್ಲ. ಇಡಿ ಅಧಿಕಾರಿಗಳು ನೇರವಾಗಿ ಬಂದು ನಾಗೇಂದ್ರರನ್ನು ಬಂಧಿಸಿದ್ರು. ಇಡಿ ಅಧಿಕಾರಿಗಳು ದೇಶಾದ್ಯಂತ ಅನಾಹುತ ಸೃಷ್ಟಿ ಮಾಡುತ್ತಿದ್ದಾರೆ ಎಂದರು.

 

Related