ನಮ್ಮ ದಿನನಿತ್ಯದ ಕೆಲಸ ಕಾರ್ಯದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆ ಗಮನಹರಿಸಲು ಆಗುವುದಿಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಇಂಥ ಸಮಯದಲ್ಲಿ ನಾವು ಅನ್ನದ ಬದಲಿಗೆ ರಾಗಿ, ಜೋಳ, ಗೋಧಿ, ಹಾಗೂ ಇನ್ನಿತರ ದವಸ ಧಾನ್ಯಗಳನ್ನು ಬಳಸಿ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ಹೌದು, ಅನ್ನದ ಬದಲಿಗೆ ಇವುಗಳನ್ನು ತಿನ್ನುವುದರಿಂದ ನಿಮ್ಮ ದೇಹದ ತೂಕ ಕಡಿಮೆಮಾಡಿಕೊಳ್ಳಿ.
ಬನ್ನೀ ಹಾಗಿದ್ರೆ ಅಕ್ಕಿಯ ಬದಲಿಗೆ ಹೆಚ್ಚು ಫೈಬರ್ ಹಾಗೂ ಕಡಿಮೆ ಕ್ಯಾಲೋರಿ ಇರುವ ಕೆಲವು ಆಹಾರಗಳ ಬಗ್ಗೆಇಲ್ಲಿದೆ ಮಾಹಿತಿ.
ರಾಗಿ: ರಾಗಿಯಿಂದ ರಾಗಿದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ ಹಾಗೂ ರಾಗಿ ಹಲ್ವಾ ಮುಂತಾದವುಗಳನ್ನು ದಿನನಿತ್ಯ ನಮ್ಮ ಆಹಾರದಲ್ಲಿ ಬಳಸುವುದರಿಂದ ದೇಹ ತಂಪು ಮಾಡುವುದರ ಜೊತೆಗೆ ತೂಕವನ್ನು ಕಡಿಮೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.
ಗೋಧಿ ನುಚ್ಚು: ಇದು ನಮ್ಮ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಹಾಗಾಗಿ ಮಧ್ಯಾಹ್ನದ ಹೊತ್ತಿನಲ್ಲಿ ಅನ್ನದ ಬದಲು ಎರಡು ಚಪಾತಿ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು.
ಕೆಂಪು ಅಕ್ಕಿ: ಇದರಲ್ಲಿ ಫೈಬರ್ ಅಧಿಕವಾಗಿರುವುದರ ಜೊತೆಗೆ ವಿಟಮಿನ್ ಹಾಗೂ ಖನಿಜಗಳೂ ಇವೆ. ಅಷ್ಟೇ ಅಲ್ಲದೆ ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಂಪಕ್ಕಿಯನ್ನು ಡಯಾಬಿಟಿಸ್ ಇರುವವರು ಹೆಚ್ಚಾಗಿ ಬಳಸುವುದರಿಂದ ಸಕ್ಕರೆ ರೋಗವನ್ನು ನಿಯಂತ್ರಣದಲ್ಲಿಡಬಹುದು.
ಬಾರ್ಲಿ: ಇದನ್ನು ನಮ್ಮಆಹಾರದಲ್ಲಿ ಸೇವನೆ ಮಾಡುವುದರಿಂದ ಹಸಿವು ಕಡಿಮೆ ಮಾಡುತ್ತದೆ ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ತಂಪಾಗಿಡುತ್ತದೆ. ಬಾರ್ಲಿ ಅಕ್ಕಿಯನ್ನು ರಾತ್ರಿ ಹೊತ್ತಿನಲ್ಲಿ ನೆನೆಸಿ ಬೆಳಿಗ್ಗೆ ಚೆನ್ನಾಗಿ ಕುದಿಸಿ ಗಂಜಿ ಸೇವನೆ ಮಾಡುವುದರಿಂದ ಉಷ್ಣತೆ ಕಡಿಮೆಯಾಗುತ್ತದೆ.
ಓಟ್ಸ್: ಇದರಲ್ಲಿ ಅತಿ ಹೆಚ್ಚು ಫೈಬರ್ ಇರುತ್ತದೆ. ಇದನ್ನು ಮಧ್ಯಾಹ್ನ ತಿನ್ನುವುದರಿಂದ ಹಸಿವು ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕ್ವಿನೋವಾ: ಇದರಲ್ಲಿ ಅತಿಹೆಚ್ಚು ಪ್ರೋಟೀನ್, ವಿಟಮಿನ್, ಫೈಬರ್ ಗಳಿವೆ. ಇದು ಹೆಚ್ಚಿನ ಹಸಿವು ಕಡಿಮೆ ಮಾಡಲು ಹಾಗೂ ನಮ್ಮ ದೇಹದ ತೂಕ ನಿಯಂತ್ರಿಸಲು ಇದನ್ನು ಬಳಸುವುದು ಉತ್ತಮ.
