ಶಹಾಪುರ: ಅಂಗವಿಕಲರು ತಾವು ಸಮಾಜಕ್ಕೆ ಹೊರೆ ಎಂದುಕೊಳ್ಳಬಾರದು. ಬಹಳಷ್ಟು ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸಾಧನೆ ಮೆರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಸಚಿವರ ಕಚೇರಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಡಿ ಆಯ್ಕೆಯಾದ 15 ಜನ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು ಈಗಾಗಲೇ 15 ಜನ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಸಿದ್ದು ಇನ್ನೂ 4 ಜನರಿಗೆ ವಿತರಿಸಲಾಗುವುದು ಎಂದು ಹೇಳಿದರು. ವಿಕಲಚೇತನರು ಅಭಿರುಚಿ ಇರುವ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡಿದಲ್ಲಿ ಅಸಮಾನ್ಯ ಸಾಧನೆ ಮಾಡುತ್ತಾರೆ. ಸಾಮಾನ್ಯರಿಗಿಂತ ವಿಕಲಚೇತನರು ವಿಶ್ವಮಟ್ಟದಲ್ಲಿ ಅಸಾಮಾನ್ಯ ಸಾಧನೆ ಮಾಡಿ ಉದಾಹಣೆಗಳಿವೆ. ಇದನ್ನೂ ಓದಿ: ದೇಶ ಕಟ್ಟಲು ನೆಹರೂ ಅವರು ಹಾಕಿರುವ ಅಡಿಪಾಯಕ್ಕೆ ಬೆಂಗಳೂರೇ ಸಾಕ್ಷಿ: ಡಿಕೆಶಿ
ಇನ್ನು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಸಧೃಢವಾಗಿ ಜೀವನ ನಡೆಸುವಂತೆ ಅವರಿಗೆ ಸ್ಫೂರ್ತಿ ತುಂಬಬೇಕು. ಜೀವನದ ಮರು ಮುದ್ರಣ ಸಾಧ್ಯವಿಲ್ಲ ಹಾಗಾಗಿ ಅವರ ಅಂಗನ್ಯೂನ್ಯತೆ ಎತ್ತಿಹಿಡಿಯುವ ಬದಲು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು. ಹಾಗೂ ತ್ರಿಚಕ್ರ ವಾಹನಗಳು ಸರಿಯಾಗಿ ಸದ್ಬಳಕೆಯಾಗಲಿ. ಸಂಚಾರಿ ನಿಯಮಗಳ ಪಾಲನೆಯೊಂದಿಗೆ ರಸ್ತೆಗಳಲ್ಲಿ ಸಂಚರಿಸಿ. ಯಾವುದೇ ಕಾರಣಕ್ಕೂ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡುವಂತಿಲ್ಲಾ. ವಿಕಲಚೇತನರು ಕಡ್ಡಾಯವಾಗಿ ಹೇಲ್ಮೇಟ್ ಧರಿಸಿಕೊಂಡು ಚಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ವಿಕಲಚೇತನರ ಮೇಲೆ ಅಪಾರ ಕಾಳಜಿ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ಇಲಾಖೆಯಡಿಗಳಲ್ಲಿ ಬರುವ ತ್ರಿಚಕ್ರ ವಾಹನಗಳನ್ನು ಸರಿಯಾದ ಸಮಯಕ್ಕೆ ನೋಂದಾಯಿತ ಫಲಾನುಭವಿಗಳಿಗೆ ವಿತರಿಸುವ ಕಾರ್ಯ ಮಾಡಿ ವಿಕಲಚೇತನರ ಬದುಕಿಗೆ ಆಶಾಕಿರಣರಾಗಿದ್ದಾರೆ ಎಂದು ಅಂಗವಿಕಲರ ಸಂಘದ ತಾಲೂಕ ಅಧ್ಯಕ್ಷರಾದ ಬಾಬು ಜಾನಿ ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಶರಣು ಪಾಟೀಲ್, ಶಿವಮಾಹಂತ ಚಂದಾಪುರ, ಮಾನಪ್ಪ ಗಡ್ಡದ್, ಮಲ್ಲಪ್ಪ ಬಿರನೂರ, ಶರಬಣ್ಣ ರಸ್ತಾಪುರ, ರವಿ ರಾಜಾಪುರ, ಎಂಆರ್‌ಡಬ್ಲುö್ಯ ನಾಗರಾಜ, ರಮೇಶ ಹಳಿಸಗರ, ಬಸ್ಸು ಸೇರಿದಂತೆ ಇತರರು ಇದ್ದರು.