ಹೊಸಾ ನಟಿಯರ ದೇಹದ ಬಗ್ಗೆ ಮಾತನಾಡಬೇಡಿ : ಪ್ರಿಯಾಂಕಾ ಉಪೇಂದ್ರ

  • In Cinema
  • May 19, 2022
  • 317 Views

‘ಸಿನಿಮಾ, ಸೀರಿಯಲ್ಮಾಡುವವರು ಹೊಸದಾಗಿ ಬರುವ ನಟಿಯರ ದೇಹದ ಬಗ್ಗೆ ಕಮೆಂಟ್ಮಾಡೋದು ಒಳ್ಳೆಯದಲ್ಲ. ಮನರಂಜನಾ ಕ್ಷೇತ್ರಕ್ಕೆ ಬರುವ ಹೊಸಬರೂ ಎಲ್ಲಕ್ಕಿಂತ ಬದುಕು ತುಂಬಾ ಮುಖ್ಯ ಅನ್ನೋದನ್ನು ಅರಿಯಬೇಕು’ ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಬೊಜ್ಜು ಕರಗಿಸುವ ಸರ್ಜರಿಗೊಳಗಾಗಿ ಸಾವನ್ನಪ್ಪಿರುವ ಕಿರುತೆರೆ ನಟಿ ಚೇತನಾ ರಾಜ್ನಿಧನದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.


‘ಚೇತನಾ ನಿಧನದ ಸುದ್ದಿ ನನಗೂ ಶಾಕಿಂಗ್ಆಗಿತ್ತು. ನಟಿಯರ ದೇಹದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲೂ ಮನಸ್ಸಿಗೆ ಬಂದಂತೆ ಕಮೆಂಟ್ಮಾಡುತ್ತಾರೆ. ಇದು ನಟಿಯರ ಆತ್ಮವಿಶ್ವಾಸ ತಗ್ಗಿಸುತ್ತದೆ. ನನ್ನ ದೇಹ ಚೆನ್ನಾಗಿಲ್ಲ. ಸರ್ಜರಿ ಮಾಡಿಸ್ಕೊಳ್ಳಬೇಕು ಎಂಬಂಥಾ ಯೋಚನೆ ಬರುತ್ತವೆ. ಚಿಕ್ಕ ವಯಸ್ಸಿನ ನಟಿಯರು ಈ ಚಿಕಿತ್ಸೆ, ಸರ್ಜರಿಗಳ ಸೈಡ್ಎಫೆಕ್ಟ್ಗಳ ಬಗ್ಗೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಕೆಲವೊಮ್ಮೆ ಅವರ ಪ್ರಾಣಕ್ಕೇ ಅಪಾಯ ತರುತ್ತದೆ. ಈ ಹಿಂದೆ ಬೆಂಗಾಲಿ ನಟಿಯೊಬ್ಬರೂ ಇದೇ ಥರ ಸಾವನ್ನಪ್ಪಿದ್ದರು. ಎಲ್ಲ ನಟಿಯರಲ್ಲಿ ನಾನು ಹೇಳೋದು, ದಯಮಾಡಿ ಸೋಷಿಯಲ್ಮೀಡಿಯಾ ಕಮೆಂಟ್ಸ್, ನಿಮ್ಮ ದೇಹದ ಬಗ್ಗೆ ಇತರರು ಮಾಡುವ ಕಮೆಂಟ್ಸ್ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರತಿಭೆಯ ಮೂಲಕ ಮುಂದೆ ಬನ್ನಿ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

Related