ಶಹಾಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಜೆಎಂ (ಜಲಜೀವನ್ ಮಿಷನ್) ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಹಿನ್ನಲೇ ಗುತ್ತಿಗೆದಾರರು ಕುಟುಂಬ ಸಮೇತ ಬೀದಿಗೆ ಬೀಳಬೇಕಾದ ಪರಿಸ್ಥೀತಿ ಬಂದಿದ್ದು ಆತ್ಮಹತ್ಯೆ ಒಂದೇ ದಾರಿ ಎಂದು ಕಾಮಗಾರಿ ಮಾಡಿದ ಗುತ್ತಿಗೆದಾರರು ನಿತ್ಯ ಕಣ್ಣಿರಿಡುತ್ತಿದ್ದಾರೆ.
ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ಕಳೆದರು ಸಹ ಕೇಲವರಿಗೆ ಬಿಲ್ ಪಾವತಿಯಾಗಿಲ್ಲ. ಕಳೆದ ಒಂದು ವರ್ಷದ ಹಿಂದೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದ ಬಿಲ್ ಆಗಿಲ್ಲಾ. ಇದರಿಂದ ಗುತ್ತಿಗೆದಾರರು ಸಾಲಗಾರರ ಭೀತಿಗೆ ಮನೆಯಿಂದ ಹೊರ ಬರಲು ಸಹ ಹಿಂಜರೆಯುತ್ತಿದ್ದಾರೆ.
ಕ.ಕರ್ನಾಟಕ ಭಾಗದಲ್ಲಿ ಜೆಜೆಎಂ ಕಾಮಗಾರಿ ಮಾಡಿ ವರ್ಷವಾದರೂ ಇಲಾಖೆಯಿಂದ ಹಣ ಬಿಡುಗಡೆ ಆಗಿಲ್ಲ. ಮಾಹಿತಿಗಳ ಪ್ರಕಾರ ಇಡೀ ರಾಜ್ಯದೆಲ್ಲೇಡೆ ಇದೇ ಹಣೆ ಬರಹವಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿದ ಗುತ್ತಿಗೆದಾರರು ಕಣ್ಣಿರು ಹಾಕಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕೈಗೊಂಡಿರುವ ಜೆಜೆಎಂ ಕಾಮಗಾರಿಗಳು ಪೂರ್ಣಗೊಂಡರು ಬಾಕಿ ಪಾವತಿ ನೀಡದೆ ಸರ್ಕಾರ ಹಾಗೂ ಇಲಾಖೆ ಸತಾಯಿಸುತ್ತಿದೆ. ಸುಮಾರು ಎರಡು ವರ್ಷದಿಂದ ಬಿಲ್ ಬಾಕಿ ಇದ್ದು, ಕನಿಷ್ಠ ಶೇ.೫೦ ರಷ್ಟಾದರೂ ಬಾಕಿ ಪಾವತಿಯನ್ನಾದರು ಮಾಡಿ. ಕಳೆದ ಎರಡು ವರ್ಷದಿಂದ ಸುಮಾರು ೫೦೦ ಕೋಟಿಯಷ್ಟು ಬಾಕಿ ಉಳಿಸಿಕೊಳ್ಳಲಾಗಿದೆ. ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿ ಇದ್ದು, ಮನೆ, ಒಡವೆಗಳನ್ನು ಒತ್ತೆ ಯಿಟ್ಟು ಕಾಮಗಾರಿ ಮಾಡಿ ಇದೀಗ ಮಾಡಿದ ಕಾಮಗಾರಿಗೆ ಬಿಲ್ ಹಾಗದೇ ಇದ್ದು, ಸಾಲಭಾದೆ ತಾಳಲಾರದೆ ಆತ್ಮಹತ್ಯೆಯಂತಹ ತೀರ್ಮಾನಕ್ಕೂ ಬಂದಿದ್ದಾರೆ. ಯಾರು ಸಹ ಗುತ್ತಿಗೆದಾರರ ನೋವಿಗೆ ಸ್ಪಂದಿಸುತ್ತಿಲ್ಲ.
ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕಾರಣ ಏನು ಎಂಬುವುದು ಗೊತ್ತಿಲ್ಲ. ಇಕ್ಕಟ್ಟಿನ ಸ್ಥೀತಿಯಲ್ಲಿರುವ ಗುತ್ತಿಗೆದಾರರು ಒಂದೆಡೆ ಕೈಗೆತ್ತಿಕೊಂಡಿರುವ ಕಾಮಗಾರಿ ನಿಲ್ಲಿಸುವ ಹಾಗೆ ಇಲ್ಲಾ. ಹಣಕಾಸಿನ ತೊಂದರೆಯಿಂದ ಮುಂದುವರಿಯುವ ಹಾಗೀಲ್ಲಾ ಎಂಬುವಂತೆ ಸ್ಥೀತಿ ನಮಗೀದೆ. ಕನಿಷ್ಠ ೫೦ ಶೇ ರಷ್ಟು ಹಣ ಪಾವತಿ ಮಾಡಿ. ಹಲವೇಡೆ ಜೆಜೆಎಂ ಕಾಮಗಾರಿ ಪೂರ್ಣಗೊಂಡು ಹಸ್ತಾಂತರಕ್ಕೆ ಸಜ್ಜಾಗಿವೆ. ಆದರೆ ಎರಡು ವರ್ಷದಿಂದ ಸರ್ಕಾರದಿಂದ ಯಾವುದೇ ಬಿಲ್ ಪಾವತಿ ಆಗಿಲ್ಲ. ಇಲಾಖೆ ಕಛೇರಿಗೆ ಹೋಗಿ ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಮರಳುವ ಪರಿಸ್ಥೀತಿ ಗುತ್ತಿಗೆದಾರರಿಗೆ ಇದೆ. ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
