ಬೆಂಗಳೂರು: ಇಂದು ಕೇಂದ್ರ ಬಜೆಟ್ ಮಂಡನೆಯನ್ನು ನಿರ್ಮಲಾ ಸೀತಾರಾಮನ್ ಅವರು ಮಾಡುತ್ತಿದ್ದು, ಇಡೀ ದೇಶದ ಜನತೆಯ ಚಿತ್ತ ಬಜೆಟ್ ಮಂಡನೆ ಎತ್ತ ಎಂಬಂತಾಗಿದೆ.
ಹೌದು, ಕೇಂದ್ರ ಹಣಕಾಸು ಸಚಿವರಾಗಿರುವಂತಹ ನಿರ್ಮಲಾ ಸೀತಾರಾಮನ್ ಅವರು ಎಂಟನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು, ಇದು ನಿರ್ಮಲಾ ಸೀತಾರಾಮನ್ ರವರ ಇತಿಹಾಸ ಸೃಷ್ಟಿಯಾಗಿದೆ.
ಇನ್ನು ಈ ಭಾರಿ ಬಜೆಟ್ ಮಂಡನೆಯಲ್ಲಿ ಆರ್ಥಿಕ ಹಿಂಜರಿತ, ಹಣದುಬ್ಬರ, ನಿರುದ್ಯೋಗ ಸಮಸ್ಯೆ, ಜಿಡಿಪಿಯಲ್ಲಿ ಇಳಿಕೆ ಹೀಗೆ ಹಲವು ಸವಾಲುಗಳ ಮಧ್ಯೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಶನಿವಾರ ಫೆ. 01) ದಾಖಲೆಯ ಎಂಟನೇ ಬಜೆಟ್ ಮಂಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದನ್ನೂ ಓದಿ: ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ: ಸಿ.ಎಂ
2025-26ರ ಬಜೆಟ್‌ನಲ್ಲಿ ಬಡತನ, ಯುವಕರು, ಮಹಿಳೆಯರು, ಕೃಷಿ, ಉತ್ಪಾದನೆ, ಎಂಎಸ್‌ಎಂಇಗಳು, ಉದ್ಯೋಗ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ 10 ಪ್ರಮುಖ ಅಭಿವೃದ್ಧಿ ಕ್ರಮಗಳನ್ನು ವಿವರಿಸಿದರು.