ಕಷ್ಟಗಳನ್ನು ಬೇದಿಸಿ ಗುರಿ ಮುಟ್ಟುವ ಪ್ರಯತ್ನ ಮಾಡಿ

ಕಷ್ಟಗಳನ್ನು ಬೇದಿಸಿ ಗುರಿ ಮುಟ್ಟುವ ಪ್ರಯತ್ನ ಮಾಡಿ

ಶಹಾಪುರ : ಕಷ್ಟಗಳನ್ನು ಬೇದಿಸಿ ಗುರಿ ಮಟ್ಟುವ ಪ್ರಯತ್ನ ಮಾಡಿ. ಗುರು ಹಿರಿಯರ ಮಾರ್ಗದರ್ಶನ ಹಾಗೂ ತಂದೆ ತಾಯಿಯ ಆಶಿರ್ವಾದದಿಂದ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದೇ ಆದರೆ ಉತ್ತುಂಗ ಸ್ಥಾನ ಸಿಗಲಿದೆ ಎಂದು ಸರ್ಕಾರಿ ಬಾಲಕರ ಪ.ಪೂ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಕರೀಮ್ ಹೇಳಿದರು.

ನಗರದ ಗೋಕುಲ ಪದವಿ ಹಾಗೂ C.G  ಪದವಿ ಪೂರ್ವ ಮಹಾವಿದ್ಯಾಲಯ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸೊಗಡಿನ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುತ್ತಾ, ಶಿಸ್ತು, ಸಮಯ ಪ್ರಜ್ಞೆ, ಶ್ರದ್ಧೆ, ಗುರು-ಹಿರಿಯರಿಗೆ ಗೌರವ ನೀಡಬೇಕು. ಶಿಕ್ಷಣವು ಜೀವನದಲ್ಲಿ ಮುಖ್ಯವಾಗಿದ್ದು, ಉತ್ತಮ ಶಿಕ್ಷಣ ಪಡೆದು ಉನ್ನತ ಉದ್ದೆಯನ್ನು ಪಡೆದಿದ್ದೇ ಆದರೆ ಕಲಿತ ಕಾಲೇಜಿಗೂ ಮತ್ತು ಪೋಷಕರಿಗೂ ಕೀರ್ತಿ ಹೆಚ್ಚುತ್ತದೆ ಎಂದರು.

ಕರ್ನಾಟಕ ರಾಜ್ಯದ ವೀರಶೈವ ಮಹಾಸಭಾದ ಸದಸ್ಯ ರೇಣುಕಾ ಚಟ್ರಕಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ಬಾಲಕರಂತೆ ಸರಿ ಸಮಾನವಾಗಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾವು ಕೂಡಾ ಬಾಲಕರಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕೆಂದು ಹೇಳಿದರು.

ಗೋಕುಲ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ರವಿಂದ್ರ ದೋರನಳ್ಳಿ ಅವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ನಮ್ಮ ಸಂಸ್ಥೆ ನಿರಂತರ ಸೇವೆ ಸಲ್ಲಿಸುತ್ತಿದೆ ಇದರ ಲಾಭವನ್ನು ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಗುಲ್ಬರ್ಗಾ ವಿ.ವಿ ಸಿಂಡಿಕೇಟ್ ಸದಸ್ಯ ಗಂಗಾಧರ ನಾಯಕ, ಆನಂದಕುಮಾರ ಹವಾಲ್ದಾರ ಮುಡಬೂಳ, ಈಶ್ವರಪ್ಪ ಅಬ್ಬಿಗೇರ್, ಪ್ರಭುಗೌಡ, ಮಹೇಶಕುಮಾರ, ರವಿ, ಬಸವಲಿಂಗಪ್ಪ, ಇಮ್ರಾನ್, ಶರಣು, ವಿರೇಶ, ರೋಹಿದಾಸ್, ಜಗದಿಶ್, ರಾಹುಲ, ಶರಣಮ್ಮ, ಕು.ಐಶ್ವರ್ಯ, ಕು.ಈರಮ್ಮ, ಕು.ಸಿದ್ದಮ್ಮ, ದೇವು ನಾಯಕ್, ಭೀಮರಾಯ ಚಿಪ್ಪಾರ್, ಬಸವರಾಜ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇನ್ನಿತರರಿದ್ದರು.

Related