ದೆಹಲಿಯಲ್ಲಿ ರೈಲ್ವೆಗೆ ನುಗ್ಗಿದ ಪ್ರತಿಭಟನಾಕಾರರಿಂದ ಬೋಗಿಗಳಿಗೆ ಬೆಂಕಿ..!

  • In Crime
  • June 17, 2022
  • 277 Views
ದೆಹಲಿಯಲ್ಲಿ ರೈಲ್ವೆಗೆ ನುಗ್ಗಿದ ಪ್ರತಿಭಟನಾಕಾರರಿಂದ ಬೋಗಿಗಳಿಗೆ ಬೆಂಕಿ..!

ನವದೆಹಲಿ: ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉತ್ತರಕ್ಕೆ ಸೀಮಿತವಾಗಿದ್ದ ಪ್ರತಿಭಟನೆ ಕಾವು ಈಗ ದಕ್ಷಿಣಕ್ಕೂ ವಿಸ್ತರಿಸಿದ್ದು, ತೆಲಂಗಾಣ ಹೊತ್ತಿ ಉರಿದಿದೆ. ಉದ್ಯೋಗಾಕಾಂಕ್ಷಿಗಳು ರೈಲುಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ದಾಳಿ ನಡೆಸುತ್ತಿದ್ದು ಇಡೀ ದೇಶಕ್ಕೆ ಈಗ ಅಗ್ನಿಪಥ್ ಭೀತಿ ಶುರುವಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಅಗ್ನಿಪಥ್ ಗೇಮ್ ಚೇಂಜರ್ ಸ್ಕೀಮ್ ಅಂತಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದರು. ಆದರೆ ಈ ಯೋಜನೆಯ ವಿರುದ್ಧವೇ ಉದ್ಯೋಗಾಕಾಂಕ್ಷಿಗಳು ರೆಬಲ್ ಆಗಿದ್ದಾರೆ. ಯೋಜನೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ನಿನ್ನೆ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಜಮ್ಮು ಕಾಶ್ಮೀರ ಅಂತಾ ಉತ್ತರ ಪ್ರದೇಶಕ್ಕೆ ಸೀಮಿತವಾಗಿದ್ದು ಪ್ರತಿಭಟನೆ ಇಂದು ದಕ್ಷಿಣ ಭಾರತಕ್ಕೂ ವ್ಯಾಪ್ತಿಸಿದೆ.

ಇಂದು ತೆಲಂಗಾಣದಲ್ಲಿ ಯೋಜನೆ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ. ತೆಲಂಗಾಣದ ಸಿಕಂದರಾಬಾದ್ ನಲ್ಲಿ ರೈಲ್ವೆ ನುಗ್ಗಿದ ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದರು. ಹಿಂಸಾಚಾರದ ನಡುವೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಿಹಾರದಲ್ಲಿ ತೀವ್ರಗೊಂಡ ಹೋರಾಟ: ಪ್ರತಿಭಟನೆಯ ಕೇಂದ್ರ ಬಿಂದು ಬಿಹಾರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಯೋಜನೆಯನ್ನು ಹಿಂಪಡೆಯಲ್ಲ ಎಂದು ಸ್ಪಷ್ಟನೆ ನೀಡಿದ ಬಳಿಕ ಹೋರಾಟಗಾರರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

Related