ಕಿಚ್ಚ ಸುದೀಪ್‍ಗೆ ಟೀಕೆ

ಕಿಚ್ಚ ಸುದೀಪ್‍ಗೆ ಟೀಕೆ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನದಂದು ತಾವು ರಾಷ್ಟ್ರಗೀತೆ ಹಾಡಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡು, ಎಲ್ಲರಿಗೂ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿದ್ದರು.
ಸುದೀಪ್ ರವರು ಟ್ವಿಟರ್ ನಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ರಾಷ್ಟ್ರಗೀತೆ 1.04 ಸೆಕೆಂಡಿನಲ್ಲಿ ಹಾಡಿದ್ದರು. ಇದನ್ನು ನೋಡಿದ ವ್ಯಕ್ತಿಯೊಬ್ಬ ಕರೆಕ್ಟ್ ಆಗಿ ರಾಷ್ಟಗೀತೆ ಹಾಡಿ ಸರ್. ಆದ್ರೆ 48-52 ಸೆಕೆಂಡಿನೊಳಗೆ ಹಾಡಬೇಕು ಎಂಬ ಕಾಮನ್ ಸೆನ್ಸ್ ಕೂಡ ಇಲ್ವಾ ಎಂದು ಟೀಕಿಸಿದ್ದಾರೆ. ಅದಕ್ಕೆ ಸುದೀಪ್ ರವರು ಸೋಮವಾರ ಪ್ರತಿ ಉತ್ತರವನ್ನು ಕೊಟ್ಟಿದ್ದಾರೆ.
ಸುದೀಪ್ ಆ ವ್ಯಕ್ತಿಗೆ ಪ್ರತಿಕ್ರಿಯಿಸಿ, ನಿಮ್ಮ ಮಾತನ್ನು ನಾನು ಸ್ವಾಗತಿಸುತ್ತೇನೆ. ಆದರೆ ನನ್ನ ದೇಶಕ್ಕಾಗಿ ನನಗೆ ಅನ್ನಿಸಿದ್ದನ್ನು ಪ್ರೀತಿಯಿಂದ ಮಾಡಿದ್ದೇನೆ. ಜೈ ಹಿಂದ್ ಎಂದಿದ್ದಾರೆ.

Related