ಬೆಂಗಳೂರು: ಕನ್ನಡ ಚಿತ್ರರಂಗದ ದಿವಂಗತ ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ವರ್ಷಗಳ ಕಳೆದರೂ ಮಾತ್ರ ಅವನು ನೆನಪು ಇನ್ನೂ ಹಸಿರಾಗಿದೆ.
ಹೌದು, ನಟ ಪುನೀತ್ ರಾಜಕುಮಾರ್ ಅವರು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಾದ್ಯಂತ ತಮ್ಮ ಹೆಸರನ್ನು ಅಚ್ಚೆಯಂತೆ ಉಳಿಸಿ ಹೋಗಿದ್ದಾರೆ. ಅವರು ನಿಧನವಾಗಿದ್ದರು ಕೂಡ ಅವರ ನೆನಪು, ಅವರ ಹಾಡುಗಳು, ಅವರ ನಟನೆ, ಅವರ ಮಾತುಗಳು ಇನ್ನೂ ಈ ಭೂಮಿ ಮೇಲೆ ಜೀವಂತವಾಗಿವೆ.
ಇನ್ನು ನಟ ಪುನೀತ್ ರಾಜಕುಮಾರ್ ಅವರಿಗೆ ಇಂದು 50 ವರ್ಷ ತುಂಬಿದ್ದು, ನೆಚ್ಚಿನ ನಟನ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ವಿವಿಧ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ರಕ್ತದಾನ ಶಿಬಿರ, ಅನ್ನಸಂತರ್ಪ, ಉಚಿತ ಆರೋಗ್ಯ ತಪಾಸಣೆ ಹೀಗೆ ಇನ್ನು ಹಲವಾರು ಕಾರ್ಯಕ್ರಮಗಳನ್ನು ನೆಚ್ಚಿನ ನಟನ ಹೆಸರಿನ ಮೇಲೆ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.
ಪತ್ನಿ ಅಶ್ವಿನಿ ಪುನೀತ್ ಮತ್ತು ಕುಟುಂಬಸ್ಥರಿಂದ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಅಪ್ಪು ಹೆಸರಿನಲ್ಲಿ ಪುಣ್ಯಭೂಮಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ನಟ ಪುನೀತ್ ರಾಜ್‌ಕುಮಾರ್, ಬದುಕಿದ್ದಾಗಲೇ ಸಾಕಷ್ಟು ಒಳ್ಳೊಳ್ಳೆಯ ಕೆಲಸ ಮಾಡಿ ಹೋದವರು. ಯಾರಿಗೂ ಕಾಣದಂತೆ, ತೆರೆಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಅವರ ಪತ್ನಿ, ದೊಡ್ಮನೆ ಸೊಸೆ ಅಶ್ವಿನಿ ಕೂಡ ಅದನ್ನೇ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ಪುನೀತ್ ಅವರ ಹೆಸರು ಎಂದೆಂದಿಗೂ ಅಜರಾಮರವಾಗಿ ಉಳಿಯುತ್ತದೆ.