ಬಳ್ಳಾರಿ ಜೈಲಿನಲ್ಲಿ ಸುಸ್ತಾದ ಕಾಟೇರ..!

ಬಳ್ಳಾರಿ ಜೈಲಿನಲ್ಲಿ ಸುಸ್ತಾದ ಕಾಟೇರ..!

ಬಳ್ಳಾರಿ: ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಕಲಸೌಲಭ್ಯ ಒದಗುತ್ತಿರು ಮಾಹಿತಿ ಹೊರಬೀಳುತ್ತಿದ್ದಂತೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ ಈಗಾಗಲೇ 15 ದಿನ ಸಮಿಪಿಸುತ್ತಿದೆ.

ಇನ್ನು ಬಳ್ಳಾರಿ ಜೈಲಿನಲ್ಲಿ ಒದ್ದಾಡುತ್ತಿರುವ ನಟ ದರ್ಶನ್ ಅವರಿಗೆ ನನಗೆ ಈ ಜೈಲ್ ಸೆಟ್ ಆಗುತ್ತಿಲ್ಲ ದಯಮಾಡಿ ಬೇರೆ ಜೈಲಿಗೆ ಶಿಫ್ಟ್ ಮಾಡಿ ಎಂದು ಜೈಲು ಅಧಿಕಾರಿಗಳಿಗೆ ನಟ ದರ್ಶನ್ ಅವರು ಮನವಿ ಮಾಡಿದ್ದಾರಂತೆ.

ಮನೆಯವರಿಗೆ ಬಳ್ಳಾರಿ ಜೈಲಿಗೆ ಬರಲು ತೊಂದರೆಯಾಗುತ್ತಿದೆ. ಬೆಂಗಳೂರಿನಿಂದ ಬಳ್ಳಾರಿಗೆ ದೂರ ಇರುವ ಹಿನ್ನಲೆಯಲ್ಲಿ ಶಿಫ್ಟಿಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೀಗ ತಿಳಿದು ಬಂದಿದ್ದು, ಜೈಲು ಶಿಫ್ಟ್ ಬಗ್ಗೆ ಇಂದು (ಶುಕ್ರವಾರಸೆ. 13) ಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದರ್ಶನ್ ಗೆಪವಿತ್ರ ಗೌಡ ಬ್ಲ್ಯಾಕ್‌ಮೇಲ್ ಮಾಡ್ತಿದ್ಲು; ಚಾರ್ಜ್‌ಶಿಟ್ ನಲ್ಲಿ ವಿಜಯಲಕ್ಷ್ಮಿ ಹೇಳಿಕೆ..!

ಬೆಂಗಳೂರು ಸಮೀಪದಲ್ಲಿರುವ ಜೈಲಿಗೆ ನನ್ನನ್ನು ಶಿಫ್ಟ್ ಮಾಡಿ ಎಂದು ಮನವಿ ಮಾಡಿದ್ದಾರಂತೆ.

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಬಂದಿತರಾಗಿದ್ದು ಇಂದು (ಶುಕ್ರವಾರ ಸೆಪ್ಟೆಂಬರ್ 13) ರಂದು 17 ಮಂದಿಯ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿದ್ದು ಇಂದು ಜಡ್ಜ್ ಮುಂದೆ 17 ಆರೋಪಿಗಳು ಹಾಜರಾಗಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಹಾಜರಾಗಲಿರುವ ಆರೋಪಿಗಳು.

 

 

Related