ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ಗೆ ಹರಾಜು

  • In State
  • May 25, 2023
  • 163 Views
ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ಗೆ ಹರಾಜು

ಬೆಂಗಳೂರು: ಒಂದಲ್ಲ ಒಂದು ರೀತಿಯಲ್ಲಿ ಸದ್ದನ್ನು ಮಾಡುತ್ತಿರುವ ವಿಜಯಮಲ್ಯ ಅವರು 2004ರಲ್ಲಿ ರಾಜ ಟಿಪ್ಪು ಸುಲ್ತಾನ್ ಅವರು ಬಳಸುತ್ತಿದ್ದ ಖಡ್ಗವನ್ನು ಖರೀದಿ ಮಾಡಿದ್ದರು.

ವಿಜಯ್ ಮಲ್ಯ ಅವರು ಖರೀದಿಸಿದ್ದ ಟಿಪ್ಪು ಸುಲ್ತಾನ್ ಖಡ್ಗ ಹರಾಜನಲ್ಲಿದ್ದು ಸುಮಾರು 145 ಕೋಟಿಗೆ ಹರಾಜಾಗಿದೆ ಎಂದು ತಿಳಿದು ಬಂದಿದೆ.

ಹೌದು, ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ರೂ. ಗೆ ಹರಾಜು ಮಾಡಲಾಗಿದೆ. ಗೌಪ್ಯತೆ, ಸುರಕ್ಷತೆ ದೃಷ್ಟಿಯಿಂದ ಖರೀದಿದಾರರ ಹೆಸರನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.

ಟಿಪ್ಪು ಸುಲ್ತಾನ್‌ನ ಖಡ್ಗವು ಈ ಹಿಂದೆ ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಖಡ್ಗವನ್ನು 2004ರಲ್ಲಿ ವಿಜಯ್‌ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು. ಆದರೆ ಈಗ ಬರೋಬ್ಬರಿ 145 ಕೋಟಿ ರೂ.ಗೆ ಹರಾಜಾಗಿದೆ.

2018ರಲ್ಲಿ ಲಂಡನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲು ಕೋರಿದ್ದವು. ಈ ವೇಳೆ ಉತ್ತರ ನೀಡಿದ್ದ ಮಲ್ಯ ನಮ್ಮ ಕುಟುಂಬಕ್ಕೆ ದುರಾದೃಷ್ಟವಾಗಿ ಕಾಡಿದ್ದ ಖಡ್ಗವನ್ನು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದರು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಲ್ಯ ಅವರ ವಕೀಲರು ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದರು.

2004 ರಲ್ಲಿ ವಿಜಯ್ ಮಲ್ಯ 1.5 ಕೋಟಿ ರೂ. ಬೆಲೆಗೆ ಖರೀದಿಸಿದ್ದ ಖಡ್ಗ ನಿನ್ನೆ 145 ಕೋಟಿ ರೂ.ಗೆ ಹರಾಜಾಗಿದೆ. ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ಹ್ಯಾಮ್‌ ಹರಾಜು ಸಂಸ್ಥೆ ಖರೀದಿಸಿದೆ. ಖಡ್ಗ ಖರೀದಿದಾರರ ಮಾಹಿತಿ ಹಂಚಿಕೊಳ್ಳಲು ಬೋನ್‌ಹ್ಯಾಮ್‌ ನಿರಾಕರಿಸಿದೆ.

 

Related