ಮಗು ಮಾರಾಟ ಮಹಿಳೆಯರು ಸೇರಿ ಮೂವರ ಬಂಧನ

ಮಗು ಮಾರಾಟ ಮಹಿಳೆಯರು ಸೇರಿ ಮೂವರ ಬಂಧನ

ಮಂಗಳೂರು : ಮೂರು-ನಾಲ್ಕು ತಿಂಗಳ ಮಕ್ಕಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಈತನೊಂದಿಗೆ ಮತ್ತಿಬ್ಬರು ಮಹಿಳೆರನ್ನೂ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಮೂಲ್ಕಿ ನಿವಾಸಿ ರಾಯನ್ (30) ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನ ಕದ್ರಿಯ ಹೋಟೆಲ್ ಒಂದರಲ್ಲಿ ಸೆರೆ ಹಿಡಿಯಲಾಗಿದೆ. ಮಗುವನ್ನು ಖರೀದಿಸಿ ಮಾರಾಟ ಮಾಡಿದ ಕವಿತಾ ಮತ್ತು ಕವಿತಾಳಿಂದ ಮಗು ಖರೀದಿಸಿದ ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ.

ಈತ ಹಾಸನದ ಸುಮಾರು ಐದು ತಿಂಗಳ ಮಗುವನ್ನು ಕಾರ್ಕಳವಬರಿಗೆ ಸುಮಾರು 5 ಲ.ರೂ ಗಳಿಗೆ ಮಾರಾಟ ಮಾಡಿರುವ ಮಾಹಿತಿ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

Related