ಮನೆಯಲ್ಲೇ ಇರುವ ಈ ವಸ್ತು ಬಳಸಿ ಗುಲಾಬಿ ಬಣ್ಣದ ತುಟಿಗಳನ್ನ ಪಡೆಯಿರಿ

ಮನೆಯಲ್ಲೇ ಇರುವ ಈ ವಸ್ತು ಬಳಸಿ ಗುಲಾಬಿ ಬಣ್ಣದ ತುಟಿಗಳನ್ನ ಪಡೆಯಿರಿ

ಬೆಂಗಳೂರು. ಫೆ. 13: ಸಾಮಾನ್ಯವಾಗಿ ಎಲ್ಲರೂ ಹುಡುಗ-ಹುಡುಗಿಯರು ತಮ್ಮ ತುಟಿಗಳು ಗುಲಾಬಿ ವರ್ಣದ ಬಣ್ಣದಲ್ಲಿ ಇರಬೇಕೆಂದು ಬಯಸುವುದು ಸಾಮಾನ್ಯ. ಆದರೆ ಕೆಲವರಿಗೆ ತುಟಿಗಳು ಕಪ್ಪಾಗಿ ಇರುವುದರಿಂದ ಮುಖದ ಕಾಂತಿಯನ್ನು ಕಳೆದುಕೊಂಡಿರುತ್ತಾರೆ. ಆದ್ದರಿಂದ ಕೆಲವು ಮನೆಗಳಲ್ಲಿ ಸಿಗುವಂತಹ ವಸ್ತುಗಳನ್ನು ಬಳಸಿ ಗುಲಾಬಿ ವರ್ಣದ ತುಟಿಗಳನ್ನು ಪಡೆಯಬಹುದು.

ಹೌದು, ತುಟಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ತುಟಿಗಳು ಗುಲಾಬಿ ಬಣ್ಣದಲ್ಲಿ ಆಕರ್ಷಕ ತುಟಿ ಪಡೆಯಲು ಬ್ಯೂಟಿ ಪಾರ್ಲರ್ ಸುತ್ತುವವರ ಸಂಖ್ಯೆ ಕಡಿಮೆಯೇನಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಲಿಪ್ಸ್ಟಿಕ್ ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನು ಬಳಸಿ ತುಟಿ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ತಾರೆ.

ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಕ್ಕಿಂತ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ನಿಮ್ಮ ತುಟಿಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮೃದು ಹಾಗೂ ಕೋಮಲ ತುಟಿಗಳಿಗಾಗಿ ನೀವು ಸ್ವಲ್ಪ ಟೂತ್ಪೇಸ್ಟ್ ತೆಗೆದುಕೊಂಡು ತುಟಿಗಳಿಗೆ ಹಚ್ಚಿ. 2 ನಿಮಿಷಗಳ ಕಾಲ ಕೈ ಬೆರಳಿನ ಸಹಾಯದಿಂದ ತುಟಿಗಳ ಮೇಲೆ ಮಸಾಜ್ ಮಾಡಿ. ನಂತರ ಟೂತ್ಪೇಸ್ಟ್ ಸಹಾಯದಿಂದ ತುಟಿಗಳನ್ನು ನಿಧಾನವಾಗಿ ಉಜ್ಜಿ.

ಹೀಗೆ ಮಾಡಿದಾಗ ತುಟಿಗಳ ಮೇಲಿರುವ ಡೆಡ್ ಸ್ಕಿನ್ ಕಡಿಮೆಯಾಗುತ್ತದೆ. ಒಂದು ವಾರಗಳ ಕಾಲ ಪ್ರತಿದಿನ ಇದನ್ನು ಮಾಡುತ್ತ ಬಂದಲ್ಲಿ ನಿಮಗೆ ಇದರ ಫಲಿತಾಂಶ ಗೊತ್ತಾಗುತ್ತದೆ. ತುಟಿಗಳು ಮೃದುವಾಗಿ ಗುಲಾಬಿ ಬಣ್ಣ ಪಡೆಯುತ್ತವೆ.

 

Related