ಈ ಜ್ಯೂಸ್ ಹಲವು ಕಾಯಿಲೆಗಳಿಗೆ ರಾಮಬಾಣ

ಈ ಜ್ಯೂಸ್ ಹಲವು ಕಾಯಿಲೆಗಳಿಗೆ ರಾಮಬಾಣ

ಬೆಂಗಳೂರು, ಫೆ. 28: ಟೊಮೆಟೊ ಹಣ್ಣನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಅಡುಗೆಯಲ್ಲಿ ಬಳಸುತ್ತಾರೆ. ಇದನ್ನು ಪ್ರತಿನಿತ್ಯ ಜ್ಯೂಸ್ನಂತೆ ಕುಡಿದರೆ ನಮ್ಮ ಆರೋಗ್ಯಕ್ಕೆ ಏನೆಲ್ಲ ಲಾಭ ಎಂಬುದು ನಾವುವಿಂದು ತಿಳಿಯೋಣ.

ಟೊಮೆಟೊ ತರಕಾರಿಯಲ್ಲ, ಸಸ್ಯಶಾಸ್ತ್ರೀಯವಾಗಿ ಅದೊಂದು ಹಣ್ಣು. ನಿಖರವಾಗಿ ಹೇಳಬೇಕಿದ್ದರೆ ಬೆರಿ ವರ್ಗಕ್ಕೆ ಸೇರಿದ ಹಣ್ಣು.

ಟೊಮೆಟೊದಲ್ಲಿ ಶೇ.95ರಷ್ಟು ಭಾಗ ನೀರು ಇರುತ್ತದೆ. ಬೇಸಿಗೆಯಲ್ಲಿ ಧಗೆಯಿಂದ ನೆಮ್ಮದಿ ಪಡೆಯಲು ಇದರಷ್ಟು ಉತ್ತಮ ಮತ್ತು ಆರೋಗ್ಯಕರವಾದುದು ಇನ್ನೊಂದಿಲ್ಲ. ಟೊಮೆಟೊ ಮತ್ತು ಒಂದಿಷ್ಟು ಮುಳ್ಳುಸೌತೆ ತುಂಡುಗಳನ್ನು ಜ್ಯೂಸರ್‌ನಲ್ಲಿ ತಿರುಗಿಸಿ ಬಿಟ್ಟರೆ ಸಿಗುವ ರಸ ಬೇಸಿಗೆಗೊಂದು ಅದ್ಭುತ ಪಾನೀಯವಾಗುತ್ತದೆ. ಟೊಮೆಟೊದ ಉಳಿದ ಶೇ.5ರಷ್ಟುಭಾಗ ಕಾರ್ಬೊಹೈಡ್ರೇಟ್‌ಗಳು, ಪ್ರೋಟಿನ್ ಮತ್ತು ಕೊಬ್ಬನ್ನು ಒಳಗೊಂಡಿರುತ್ತದೆ. ಟೊಮೆಟೊ ಫಾಲೇಟ್, ಪೊಟ್ಯಾಷಿಯಂ, ವಿಟಾಮಿನ್ ಕೆ ಮತ್ತು ಸಿ ಇತ್ಯಾದಿಗಳಂತಹ ಖನಿಜಗಳು ಮತ್ತು ವಿಟಾಮಿನ್ಗಳ ಸಮೃದ್ಧ ಮೂಲವೂ ಆಗಿದೆ.

ಕ್ಯಾನ್ಸರ್ ನಿರೋಧಕ: ಟೊಮೆಟೊ ಕೆಂಪಗಿದ್ದಷ್ಟೂ ಅದರಲ್ಲಿ ಲೈಕೊಪೀನ್ ಸಮೃದ್ಧವಾಗಿರುತ್ತದೆ. ಇದು ವಿಶೇಷವಾಗಿ ಕರುಳು, ಸ್ತನಗಳು ಮತ್ತು ಶ್ವಾಸಕೋಶಗಳಲ್ಲಿ ಕ್ಯಾನ್ಸರ್ ಕೋಶಗಳಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಟೊಮೆಟೊದಲ್ಲಿರುವ ಉತ್ಕರ್ಷ್ಣ ನಿರೋಧಕಗಳು ಸಹ ಇದಕೆ ಪೂರಕವಾಗವೆ.

ಹೃದಯದ ಆರೋಗ್ಯ ಹೆಚ್ಚಿಸುತ್ತದೆ: ಟೊಮೆಟೊದಲ್ಲಿರುವ ಬೀಜಗಳಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ, ಬದಲಿಗೆ ಅದು ನಾರುಗಳನ್ನು ಹೊಂದಿದ್ದು, ಇವು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತವೆ. ಅದರಲ್ಲಿರುವ ಪೊಟ್ಯಾಷಿಯಂ ಕೂಡ ಹೃದ್ರೋಗಗಳನ್ನು ತಡೆಯಲು ಸಹಾಯಕವಾಗಿದೆ.

ಹೆಚ್ಚಿನ ರಕ್ತದೊತ್ತಡವನ್ನು ತಗ್ಗಿಸುತ್ತದೆ: ಟೊಮೆಟೊದಲ್ಲಿರುವ ಲೈಕೊಪೀನ್ ಮತ್ತು ಕ್ಲೋರೊಜೆನಿಕ್ ಆಯಸಿಡ್ ರಕ್ತದೊತ್ತಡ ಮಟ್ಟವನ್ನು ತಗ್ಗಿಸುತ್ತವೆ, ತನ್ಮೂಲಕ ಅಧಿಕ ರಕ್ತದೊತ್ತಡದ ವಿರುದ್ಧ ರಕ್ಷಣೆಯನ್ನು ನೀಡುತ್ತವೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ: ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೃದ್ರೋಗಗಳಳಿಗೆ ಪ್ರೆಮುಖ ಕಾರಣವಾಗಿದೆ. ಟೊಮೆಟೊ ರಕ್ತ ಹೆಪ್ಪುಗಟ್ಟವುದನ್ನು ತಡೆಯುತ್ತದೆ. ಟೊಮೊಟೊದ ಬೀಜಗಳು ಫ್ರುಟ್‌ಲೋ ಎಂದು ಕರೆಯಲಾಗುವ ದಪಪ ಲೋಳೆಯಿಂದ ಸುತ್ತುವರಿದಿರುತ್ತವೆ. ಈ ಫ್ರುಟ್‌ಲೋ ಮತ್ತು ಲೈಕೊಪೀನ್ ಸೇರಿಕೊಂಡು ರಕ್ತ ಹೆಪ್ಪುಗಟ್ಟಿ ಉಂಮಟಾಗಿರುವ ತಡೆಯನ್ನು ನಿವಾರಿಸುತ್ತವೆ.

ಜೀರ್ಣಕ್ರಿಯೆಗೆ ಸಹಕಾರಿ: ಟೊಮೆಟೊದಲ್ಲಿರುವ ನಾರು ಜೀರ್ಣಾಂಗದ ಸ್ನಾಯುಗಳ ಚಲನವಲನಗಳನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ತನ್ಮೂಲಕ ಹೆಣ್ಣು ಜೀರ್ಣ ರಸಗಳು ಬಿಡುಗಡೆಗೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ ಮತ್ತು ಅತಿಸಾರ ಅಥವಾ ಮಲಬದ್ಧತೆಯ ಸಮಸ್ಯೆಗಳಿರುವುದಿಲ್ಲ.

 

Related