ವಿರೋಧ ಪಕ್ಷದವರಿಗೆ ಅಧಿಕಾರ ಬಿಟ್ಟುಕೊಡುವ ಮಾತೇ ಇಲ್ಲ

ವಿರೋಧ ಪಕ್ಷದವರಿಗೆ ಅಧಿಕಾರ ಬಿಟ್ಟುಕೊಡುವ ಮಾತೇ ಇಲ್ಲ

ಗುಂಡ್ಲುಪೇಟೆ: ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಪರ ಇದ್ದು, ಇದರ ಅನ್ವಯ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಯಲ್ಲಿಯೂ ವಿರೋಧ ಪಕ್ಷದವರಿಗೆ ಅಧಿಕಾರ ಚುಕ್ಕಾಣಿ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು.

ಸೋಮವಾರ (ಫೆ. 03) ತಾಲ್ಲೂಕಿನ ಚಿಕ್ಕತೂಪ್ಪೂರು ಗ್ರಾಮದ ಬಳಿ 6 ಕೋಟಿ ರೂ. ವೆಚ್ಚದಲ್ಲಿ ಎಸ್.ಹೆಚ್-86 ರ ರಾಮನಾಥ ಪುರ-ತೆರಕಣಾಂಬಿ ರಸ್ತೆ ಹಾಗೂ ಯಳಂದೂರು- ಗುಂಡ್ಲುಪೇಟೆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿ ಕೆಲಸಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇದೇ ತಿಂಗಳ ಫೆ.10 ರಂದು ಪಟ್ಟಣದಲ್ಲಿ ನಡೆಯುವ ಪುರಸಭೆಯ ನೂತನ  ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ  ಪೂರ್ಣ ಬಹುಮತದಿಂದ ಪಟ್ಟಣ ಪುರಸಭೆಯ ಅಧಿಕಾರ ಚುಕ್ಕಾಣಿ  ಹಿಡಿಯಲಿದೆ ಶಾಸಕರು ಹೇಳಿದರು. ಇದನ್ನೂ ಓದಿ: ಕರಾರಸಾ ನಿಗಮಕ್ಕೆ ಮಹಾರಾಷ್ಟ್ರದ ನಾಯಕರ ಭೇಟಿ

ಪಟ್ಟಣ ಪುರಸಭೆಯ 23 ಸದಸ್ಯರು ಗಳಲ್ಲಿ ಬಿಜೆಪಿ ಪಕ್ಷದ ಸದಸ್ಯರು 13 ಮಂದಿಯಲ್ಲಿ 5 ಮಂದಿ ಸದಸ್ಯರು ಕಳೆದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಅಯ್ಕೆ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ  ಪಕ್ಷಾಂತರ ಮಾಡಿ ನಮ್ಮ ಪಕ್ಷಕ್ಕೆ ಸೆರ್ಪಡೆ ಆದ  ಕಾರಣ ಪಕ್ಷಾಂತರ ಕಾಯಿದೆ ಅನ್ವಯ ಅವರುಗಳ ಸದಸ್ಯತ್ವ ವನ್ನು ಜಿಲ್ಲಾಧಿಕಾರಿಗಳು  ಅನರ್ಹಗೊಳಿಸಿರುವ ಹಿನ್ನೆಲೆ ಬಿಜೆಪಿ ಪಕ್ಷದಲ್ಲಿ  ಈಗ ಕೇವಲ ೮ ಮಂದಿ ಮಾತ್ರ ಇದ್ದು , ಅದಕಾರಣ  ನಮ್ಮ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ  ೮ ಮಂದಿ ಸದಸ್ಯರು ಅಯ್ಕೆ ಯಾಗಿದ್ದು, ಉಳಿದಂತೆ ಪಕ್ಷೇತರ ಅಭ್ಯರ್ಥಿ ಒರ್ವ ಮತ್ತು ಎಸ್.ಡಿ.ಪಿ.ಐ. ಸದಸ್ಯ ಒರ್ವ  ಹಾಗೂ ಶಾಸಕರ ಹಾಗೂ ಸಂಸದರ ಮತದಾನ ಸೇರಿ ೧೨ ಮಂದಿ ಸದಸ್ಯರುಗಳ ಬಹುಮತದಿಂದ ಮತ್ತೇ ನಮ್ಮ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯುವುದು ಶತಸಿದ್ದ ಎಂದರು.

ಕಾನೂನು ಹೋರಾಟ

ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿ ಪಕ್ಷಾಂತರ ಮಾಡಿದ 5 ಮಂದಿ ಪುರಸಭಾ ಸದಸ್ಯರುಗಳ ಹಿತ ಕಾಯುವುದು ನಮ್ಮ ಹಕ್ಕು ಇವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ಕಲ್ಪಿಸುವ ಮೂಲಕ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅದೇ ರೀತಿ ಕಳೆದ ಪುರಸಭಾ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ (ಅಡ್ಡ ಮತದಾನದ ಮೂಲಕ) ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಸಹಕರಿಸಿದ 5 ಮಂದಿ ಬಿಜೆಪಿ ಪಕ್ಷದ ಪುರಸಭಾ ಸದಸ್ಯರು ಗಳ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಗಳು ಅದೇಶದ ವಿರುದ್ಧ ಕಾನೂನು  ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಎಸ್.ಮಹೇಶ್, ಎ.ಪಿ.ಎಂ.ಸಿ.ಅಧ್ಯಕ್ಷ ಮೊಳ್ಳಯ್ಯನ ಹುಂಡಿ ಬಸವರಾಜು, ತಾ.ಪಂ ಮಾಜಿ ಉಪಾಧ್ಯಕ್ಷೆ ಜಯಂತಿ,  ಚಿಕ್ಕತೂಪ್ಪೂರು ಗ್ರಾಮಾಧ್ಯಕ್ಷ ಮಹೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Related