ಅಹೋರಾತ್ರಿ ಧರಣಿಗೆ ಕೈ ಬಿಟ್ಟ ಗ್ರಾಮಸ್ಥರು

ಅಹೋರಾತ್ರಿ ಧರಣಿಗೆ ಕೈ ಬಿಟ್ಟ ಗ್ರಾಮಸ್ಥರು

ಬೈಲಹೊಂಗಲ : ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬುಡರಕಟ್ಟಿ ಗ್ರಾಮಸ್ಥರು ಶಾಸಕರ, ಕಾಡಾ ಅಧ್ಯಕ್ಷರ ಹಾಗೂ ಅಧಿಕಾರಿಗಳು ನೀಡಿದ ಭರವಸೆಗೆ ಸ್ಪಂದಿಸಿ ಧರಣಿ ಸತ್ಯಾಗ್ರಹದಿಂದ ಶುಕ್ರವಾರ ಹಿಂದೆ ಸರಿದರು.

ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ‘ಬರುವ ಚಳಿಗಾಲ ಅಧಿವೇಶನದಲ್ಲಿ ಮುಖ್ಯಮಂತ್ರಿ, ವಸತಿ ಸಚಿವರೊಂದಿಗೆ ಚರ್ಚಿಸಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸೂಕ್ತ ಪರಿಹಾರಧನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಹೋರಾಟಗಾರರು ಧರಣಿ ಕೈ ಬಿಡಬೇಕು’ ಎಂದು ಕೇಳಿಕೊಂಡರು ಆಗ ಗ್ರಾಮಸ್ಥರು ಧರಣಿ ಸತ್ಯಾಗ್ರಹ ಕೈ ಬಿಟ್ಟರು.

ಬಳಿಕ ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ರಫೀಕ ಬಡೇಘರ, ರಾಜು ಬೋಳನ್ನವರ ಮಾತನಾಡಿ, ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ನಿರಾಶ್ರಿತರಿಗೆ ಸರ್ಕಾರದಿಂದ ಪರಿಹಾರ ಧನ ಕಲ್ಪಿಸಿಕೊಡಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. ಧರಣಿ ಸತ್ಯಾಗ್ರಹದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಬಸವರಾಜ ನಾಗರಾಳ, ತಾ.ಪಂ ಇಒ ಸುಭಾಸ ಸಂಪಗಾಂವ, ಗ್ರಾಮಸ್ಥರು, ಸಿದ್ಧಾರೂಢ ಹೊಂಡಪ್ಪನವರ, ಶಶಿಕುಮಾರ ಪಾಟೀಲ, ಕಿರಣಕುಮಾರ ಬೆಳಗಾವಿಮಠ, ಅಭಿಷೇಕ ಹಡಪದ, ಅಭಿಷೇಕ ಕಲಾಲ, ಅನಿಲ ತೋಟಗಿ, ಮಲ್ಲಿಕಾರ್ಜುನ ಬಾಳಿ, ಮಂಜು ಇಂಗಳಗಿ, ಸೋಮ ತೋಟಗಿ, ಮಂಜು ಬೆಟಗೇರಿ, ಅನ್ನಪೂರ್ಣಾ ನಿಕ್ಕಮ್ಮನವರ,  ಕಮಲವ್ವ ಹುಗ್ಗಿ,  ಪಾರ್ವತೆವ್ವ ಮಠಪತಿ, ವೀರಭದ್ರ ಡೊಂಬರಕೊಪ್ಪ ಇನ್ನಿತರರಿದ್ದರು.

Related