ನೊಣದ ಕಾಟ ತಾಳದೆ ಗುಳೆ ಹೊರಟ ಗ್ರಾಮಸ್ಥರು

ನೊಣದ ಕಾಟ ತಾಳದೆ ಗುಳೆ ಹೊರಟ ಗ್ರಾಮಸ್ಥರು

ಕೊರಟಗೆರೆ ಆ15: ತಾಲೂಕಿನ ಬೋಮ್ಮಲದೇವಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತೊಗರಿಘಟ್ಟ ಗ್ರಾಮದ ಪಕ್ಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೋಳಿ ಫಾರಂನಿಂದ ಇಷ್ಟೇಲ್ಲಾ ಅವಾಂತರ ಸೃಷ್ಟಿಸುತ್ತಿದೆ ಎಂದು ಗ್ರಾಮದ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕೋಳಿ ಸಾಕಾಣಿಕೆ ಫಾರಂ ಪಕ್ಕದಲ್ಲಿಯೇ ಶ್ರೀ ಆದಿ ತಿಮ್ಮಪ್ಪ ದೇವಸ್ಥಾನ ಇದ್ದು ಈ ಭಾಗದ ಸುತ್ತಮುತ್ತಲಿನ ಸುಮಾರು15-20ಗ್ರಾಮದವರು ಶುಭ ಸಮಾರಂಭಗಳನ್ನು ಮಾಡುತಿದ್ದರು ಆದರೆ ಈ ಕೋಳಿ ಫಾರಂ ಆದಾಗಿನಿಂದ ನೋಣಗಳಕಾಟ ಹಾಗೂ ಗೊಬ್ಬರದ ಗಬ್ಬುನಾಥದಿಂದ ಇವೇಲ್ಲವು ನಿಂತುಹೊಗಿದೆ.

ಗಬ್ಬು ವಾಸನೆಗೆ  ತೊಗರಿಘಟ್ಟ, ಮುದ್ದನಹಳ್ಳಿ ಬಿ.ಡಿ.ಪುರ ದುಗ್ಗೆನಹಳ್ಳಿ, ಶಕುನಿತಿಮ್ಮನಹಳ್ಳಿ , ಸೇರಿದಂತೆ ಸುಮಾರು ಹದಿನೈದು ಇಪ್ಪತ್ತು ಹಳ್ಳಿಗಳ ಜನರು ವಾಸನೆಗೆ ಹಾಗೂ ನೊಣಗಳ ಕಾಟಕ್ಕೆ ಬೆಸತ್ತು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ಈ ಭಾಗದ ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ನೋಣ ಊಜಿ ಕಾಟಕ್ಕೆ ಇಂದು ರೈತರು ಬೆಳೆದ ಬೆಳೆ ಕೈಸೇರುತಿಲ್ಲ ಇದರಿಂದ ಇದಕ್ಕೆ ಏನು ಮಾಡಬೇಕೆಂದು ತೋಚದೇ ಮಾಡಿದ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಬೇಕು ಇಲ್ಲ ಗ್ರಾಮ ತೊರೆಯಬೇಕು ಎನ್ನುತ್ತಿದ್ದಾರೆ.

ಮಾಜಿ ಡಿಸಿಎಂ ಹಾಲಿ ಶಾಸಕ ಜಿ.ಪರಮೇಶ್ವರ್ ರವರ ಕುಮ್ಮಕ್ಕು ಈ  ಗೀತಾ ಕೋಳಿ ಫಾರಂ ನ ಮಾಲಿಕರಿಗೆ ಇದೆ ನೀವು ಯಾರು ಏನು ಬೇಕಾದರೂ ಮಾಡಿ ಇವರು ಜಗ್ಗುವುದಿಲ್ಲ ಎಂದು ಹೆದರಿಕೆ ಹಾಕಿ ಕಳಿಸುತ್ತಾರೆ ಎಂದು ಗ್ರಾಮದ ಜನರು ತಿಳಿಸಿದ್ದಾರೆ.

ಹೌದು ಇಂತಹ ಕೋಳಿ ಫಾರಂ ಪ್ರಾರಂಭ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ನಿಂದು ಅನುಮತಿ ಪಡೆಯಬೇಕು . ಅನುಮತಿ ನೀಡಲು ಗ್ರಾಮ, ಹಳ್ಳಿ, ದೇವಸ್ಥಾನ, ಶಾಲೆಗಳಿಂದ ಇಂತ್ತಿಷ್ಟು ದೂರ ಇರಬೇಕು ಎಂದು ಇರುತ್ತದೆ ಇವೇಲ್ಲವನ್ನೂ ಗಮನಿಸದೆ ಅನುಮತಿ ನೀಡಿದೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ

ಇಲ್ಲಿ ಕೋಳಿ ಸಾಕಾಣಿಕೆ ಮಾಡಿದಂತೆ ತಾಕೀತು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

 

Related