ಬೋರ್ವೆಲ್ ಲಾರಿಗಳ ಮಾಲೀಕರ ಮುಷ್ಕರ

ಬೋರ್ವೆಲ್ ಲಾರಿಗಳ ಮಾಲೀಕರ ಮುಷ್ಕರ

ಚಾಮರಾಜನಗರ:  ಡೀಸೆಲ್ ಸೇರಿದಂತೆ ಬೋರ್ವೆಲ್ ಲಾರಿಗಳಿಗೆ ಸಂಬಂಧಿಸಿದ ಉಪಕರಣಗಳ ಬೆಲೆ ಇಳಿಸುವಂತೆ ಆಗ್ರಹಿಸಿ ಚಾಮರಾಜನಗರದಲ್ಲಿ ಬೋರ್ವೆಲ್ ಲಾರಿಗಳ ಮಾಲೀಕರು, ಏಜೆಂಟರು ಸೇರಿದಂತೆ ವಿವಿಧ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಭೋಗಾಪುರ ಸಮೀಪದ ಬಯಲು ಪ್ರದೇಶದಲ್ಲಿ ೨೫ಕ್ಕೂ ಹೆಚ್ಚು ಬೋರ್ವೆಲ್ ಲಾರಿಗಳು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಡೀಸೆಲ್, ಪೈಪ್, ಹ್ಯಾಮರ್ ಸೇರಿದಂತೆ ಕೊಳವೆ ಬಾವಿ ಉಪಕರಣಗಳ ಬೆಲೆ ಹೆಚ್ಚಳವಾಗಿದೆ.
ಇದರಿಂದಾಗಿ ರೈತರ ಕೊಳವೆ ಬಾವಿ ಕೊರೆಯಲು ಹೆಚ್ಚು ಹಣ ಖರ್ಚಾಗುತ್ತಿದ್ದು, ರೈತರಿಗೆ ಹೊರೆಯಾಗುತ್ತಿದೆ. ಹೀಗಾಗಿ ಸರ್ಕಾರ ಬೋರ್ವೆಲ್ ಮಾಲೀಕರ ಮತ್ತು ರೈತರ ಹಿತ ರಕ್ಷಣೆಗಾಗಿ ಡೀಸೆಲ್ ಬೆಲೆ, ಕೊಳವೆ ಬಾವಿ ಇತರೆ ಉಪಕರಣಗಳ ಬೆಲೆ ಇಳಿಸುವಂತೆ ಮಾಲೀಕರು ಒತ್ತಾಯಿಸಿದ್ದಾರೆ.

Related