ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಚಿಂಚಲಿ, ಫೆ. 06: ಪಟ್ಟಣದ ವಾರ್ಡ್ ನಂಬರ 2 ರಲ್ಲಿ ಕಳಪೆ ಮಟ್ಟದ ಚರಂಡಿ ನಿರ್ಮಾಣ ಮಾಡುತ್ತಿದ್ದರು ಸಹ ಪಟ್ಟಣ ಪಂಚಾಯತಿ ಅಧಿಕಾರಿಗಳು ಜಾಣ ಕುರುಡುತನದಿಂದ ಕಣ್ಣುಮುಚ್ಚಿ ಕುಳಿತಿದ್ದಾರೆ.

ಸರಕಾರ ಲಕ್ಷಾಂತರ ಹಣ ವೆಚ್ಚ ಮಾಡಿ ಪಟ್ಟಣ ಸ್ವಚ್ಛತೆಗೆ ಕ್ರಮ ತಗೆದುಕೊಳ್ಳುತ್ತಿದೆ ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕ್ರೀಯಾ ಯೋಜನೆಯ ಪ್ರಕಾರ ಗುತ್ತಿಗೆದಾರ ಚರಂಡಿ ಕಾಮಗಾರಿಕೆಯನ್ನು ಕೈಗೊಳ್ಳದೆ ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಹಾಗೂ ಇಂಜಿನಿಯರಗಳಿಗೆ ಮಾಹಿತಿ ನೀಡಿದರು ಸಹ ಕಳಪೆ ಮಟ್ಟದ ಚರಂಡಿ ಕಾಮಗಾರಿಕೆ ಹಾಗೆ ಮುಂದುವರೆದಿರುವುದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಒಪ್ಪಂದದ ಮಾತುಗಳು  ಸಾರ್ವಜನಿಕರಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ.

ಪಟ್ಟಣದ ವಾರ್ಡ್ ನಂಬರ 2 ರಲ್ಲಿ 3.5 ಲಕ್ಷ ರೂಪಾಯಿಗಳ ಚರಂಡಿ ನಿರ್ಮಾಣದ ಕಾಮಗಾರಿಕೆಯು ನಡೆದಿದ್ದು, ಈ ಕಳಪೆ ಕಾಮಗಾರಿಕೆ ವೀಕ್ಷಣೆ ಮಾಡುವುದಕ್ಕೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಅವರುಗಳು ಈ ಕಾಮಗಾರಿಕೆಗೆ ಮತ್ತು ನಮಗೂ ಯಾವುದೇ ಸಂಬಂಧವಿಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

ಚರಂಡಿ: ಕಾಮಗಾರಿಕೆಯೂ ಗುತ್ತಿಗೆದಾರ ಯೋಜನೆ ಪ್ರಕಾರ ಮಾಡದೇ ಚಿಂಚಲಿ ಮಾಯಾಕ್ಕಾ ದೇವಿಯ ಜಾತ್ರೆಯ ನೆಪ ಮಾಡಿಕೊಂಡು ಚರಂಡಿ ಕಾಮಗಾರಿಕೆಯೂ ಸಂಪೂರ್ಣವಾಗಿ ಕಳಪೆ ಮಟ್ಟದ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರ ಕುಂತಿನಾಥ ಮಗದುಮ ಕಾಮಗಾರಿಕೆ ನಡೆಸಿದ್ದಾರೆ.

ವಾರ್ಡ್ ಸದಸ್ಯ: ಚರಂಡಿ ಕಾಮಗಾರಿಕೆಯೂ ಕೇವಲ ಎರಡು ಪ್ಲಾವೂಡ್ ಅಷ್ಟು ಮಾತ್ರ ಕಳಪೆವಾಗಿದೆ. ಹಿಂದೆ ಕಳಪೆಯಾದ ಕಾಮಗಾರಿಕೆಯೂ ಮುಂದೆ ಸುಧಾರಿಸಿಕೊಳ್ಳುತ್ತೇನೆ ಮತ್ತು ಈ ಕಾಮಗಾರಿಕೆ ಮಾಡುವ ಕೆಲಸಗಾರರು ಹೊಸಬರು ಹೀಗಾಗಿ ಅಳತೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ.  ಎಂದು ಗುತ್ತಿಗೆದಾರ ಪಟ್ಟಣ ಪಂಚಾಯತಿ ಸದಸ್ಯ ಸಂಜು ಮೈಶಾಳೆ ಅವರಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಮಾಧ್ಯಮದವರ ಮುಂದೆ ಹೇಳಿದರು.

ಸಾರ್ವಜನಿಕರು: ವಾರ್ಡ್ ನಂಬರ 2 ರಲ್ಲಿ ದಲಿತ ಸಮುದಾಯದ ಜನರು ವಾಸವಾಗಿದ್ದು, ಈ ವಾರ್ಡಿನಲ್ಲಿ ಚರಂಡಿ ಕಾಮಗಾರಿಕೆಯೂ ಸಂಪೂರ್ಣವಾಗಿ ಕಳಪೆ ಮಟ್ಟದಲ್ಲಿ ಗುತ್ತಿಗೆದಾರ ನಿರ್ಮಾಣ ಮಾಡುತ್ತಿದ್ದಾರೆ ದಲಿತ ಸಮುದಾಯದ ಜನರು ವಾಸವಾಗಿರುವ ವಾರ್ಡ್‍ನಲ್ಲಿ ಮಾತ್ರ ಕಳಪೆ ಕಾಮಗಾರಿಕೆ ನಡೆದಿರುವ ಬಗ್ಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನೆ ಇಲ್ಲ ಹೀಗಾಗಿ ಜಿಲ್ಲಾಧಿಕಾರಿಗಳು ಕಳಪೆ ಕಾಮಗಾರಿಕೆ ಬಗ್ಗೆ ಪ್ರತ್ಯಕ್ಷವಾಗಿ ನೋಡಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ದಲಿತ ಕ್ವಾಲನಿಯ ಚರಂಡಿ ಕಾಮಗಾರಿಕೆ ವಿರುದ್ದ ಉಗ್ರ ಹೋರಾಟ ನಡೆಸುವುದಾಗೆ ದಲಿತ ಸುಮುದಾಯದ ಸಾರ್ವಜನಿಕರು ಹೇಳಿದರು.

ಜನ ಸಾಮಾನ್ಯರ ವಂತಿಗೆಯ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರ ಬೇಜವಾಬ್ದಾರಿಯಿಂದ ಕಳಪೆ ಕಾಮಗಾರಿಕೆ ಮಾಡುವ ಮೂಲಕ ವಾರ್ಡ್ ನಂ 2ರ ಚರಂಡಿ ನಿರ್ಮಾಣ ಕಾಮಗಾರಿಕೆ ನಡೆಯುತ್ತಿದೆ ಚಿಂಚಲಿ ಪಟ್ಟಣ ಪಂಚಾಯತಿಯಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರ ನಡೆಯುತ್ತಿದೆ. ಇನ್ನಾದರೂ ಸಂಬಂದ ಪಟ್ಟ ಅಧಿಕಾರಿಗಳು ಗಮನ ಹರಿಸಿ ಕಳಪೆ ಪಟ್ಟಣ ಕಾಮಗಾರಿಕೆ ಮಾಡುತ್ತಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ.

Related